ಬಿಜೆಪಿ ವಿರುದ್ಧ ಸೋನಿಯಾ, ಶರದ್ ಪವಾರ್ ಗೆ ದೂರಿದ ಮಮತಾ ಬ್ಯಾನರ್ಜಿ
ಕೇಂದ್ರದ ಬಿಜೆಪಿ ಸರ್ಕಾರದ ದಮನ ನೀತಿ, ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ನಾವು ಬಿಜೆಪಿಯೇತರ ಪಕ್ಷಗಳು ಒಗ್ಗೂಡಿ ಹೋರಾಡಬೇಕಿದೆ. ಇದಕ್ಕಾಗಿ ನಾವೆಲ್ಲಾ ಜೊತೆಯಾಗಿ ಕೈಜೋಡಿಸಬೇಕಿದೆ ಎಂದು ಮಮತಾ ಪತ್ರ ಬರೆದಿದ್ದಾರೆ. ತಮಿಳುನಾಡಿನ ಡಿಎಂಕೆ ಪಕ್ಷದ ನಾಯಕ ಎಂಕೆ ಸ್ಟಾಲಿನ್, ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಗೂ ಪತ್ರ ಬರೆದಿದ್ದಾರೆ.