ಅತ್ತಿಗೆ, ಮಗಳ ಮೇಲೆಯೇ ಕಾಮದ ಕಣ್ಣು ಹಾಕಿದ ಮೈದುನ
ಇತ್ತೀಚೆಗಷ್ಟೇ ಮದುವೆಯಾಗಿದ್ದ ಯುವಕ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮನೆಗೆ ಬಂದಿದ್ದಾಗ ಅತ್ತಿಗೆ ಮತ್ತು ಮಗಳು ತನ್ನ ಮನೆಗೆ ಬಂದು ನೆಲೆಸಿರುವುದನ್ನು ನೋಡಿ ಆತ ಕೋಪಗೊಂಡಿದ್ದ. ಈ ಬಗ್ಗೆ ಜಗಳವೂ ಆಗಿತ್ತು. ಈ ಸಂಬಂಧ ಪೊಲೀಸರಿಗೆ ಮೊದಲು ಈತನೇ ದೂರು ನೀಡಿದ್ದ. ಇದು ಆಸ್ತಿ ಸಂಬಂಧವಾಗಿ ನಡೆಯುತ್ತಿರುವ ಗಲಾಟೆ ಎಂದು ತಿಳಿದುಬಂದಿತ್ತು.
ಆದರೆ ಮರುದಿನ ಅತ್ತಿಗೆಯೂ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಹಾಗೂ ಮಗಳ ಮೇಲೆ ಮೈದುನನೇ ಲೈಂಗಿಕ ಕುರುಕುಳ ನೀಡುತ್ತಿದ್ದಾನೆ ಎಂದು ದೂರು ನೀಡಿದ್ದಳು. ಹೀಗಾಗಿ ಪೊಲೀಸರು ಈಗ ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಯುವಕನ ಮೇಲೆ ಕ್ರಮ ಕೈಗೊಂಡಿದ್ದಾರೆ.