ಬ್ಯಾಂಕ್ ಎಡವಟ್ಟಿನಿಂದ ಲಕ್ಷ ಹಣ: ಪ್ರಧಾನಿ ಮೋದಿಯೇ ಸಹಾಯ ಮಾಡಿದ್ದು ಎಂದ ವ್ಯಕ್ತಿ!
ದಕ್ಷಿಣ ಗ್ರಾಮೀಣ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ವ್ಯಕ್ತಿಗೆ ಇದ್ದಕ್ಕಿದ್ದ ಹಾಗೆ 1,60,970 ರೂ. ಜಮಾ ಆಗುತ್ತದೆ. ಇದರಿಂದ ಅಚ್ಚರಿಗೊಳಗಾದರೂ ಇದು ತನ್ನ ಭಾಗ್ಯವೆಂದೇ ಆತ ನಂಬಿರುತ್ತಾನೆ. ಬ್ಯಾಂಕ್ ನವರಿಗೆ ಎಡವಟ್ಟಾಗಿದ್ದು ತಿಳಿದು ಹಣ ಮರಳಿಸಲು ಸೂಚಿಸಿದಾಗ ಪ್ರಧಾನಿ ಮೋದಿಯೇ ನನಗೆ ಈ ಹಣ ನೀಡಿದ್ದಾರೆ ಎಂದು ವಾದಿಸುತ್ತಾನೆ. ಹೀಗಾಗಿ ಬ್ಯಾಂಕ್ ನವರು ಆತನಿಗೆ ನೋಟಿಸ್ ನೀಡಿ ಹಣ ಮರಳಿಸಲು ಸೂಚಿಸುತ್ತಾರೆ. ಆದರೆ ಆಗಲೂ ಆತ ಒಪ್ಪುವುದಿಲ್ಲ. ಕೊನೆಗೆ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ.