ಗರ್ಲ್ ಫ್ರೆಂಡ್ ಗೆ ಗಿಫ್ಟ್ ಕೊಡಲು ಸ್ವಂತ ಮೊಮ್ಮಗಳನ್ನೇ ಅಪಹರಿಸಿದ ಭೂಪ!
56 ವರ್ಷದ ವ್ಯಕ್ತಿಗೆ ವಿವಾಹಿತ ಮಕ್ಕಳಿಲ್ಲದ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಆಕೆಗೆ ಮಕ್ಕಳ ಭಾಗ್ಯ ಕರುಣಿಸಲು ತನ್ನ ಒಂದು ತಿಂಗಳ ಮೊಮ್ಮಗಳನ್ನೇ ಅಪಹರಿಸಿ ಉಡುಗೊರೆಯಾಗಿ ನೀಡಿದ್ದ.
ಮಗು ಕಾಣೆಯಾದ ಬಗ್ಗೆ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದಾಗ ತಾತನ ಕೃತ್ಯ ಬಯಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.