ಪ್ರೇಯಸಿಯನ್ನು ಕೊಂದ ಪ್ರಿಯಕರ ಸಾಕ್ಷ್ಯ ನಾಶಪಡಿಸಲು ಮೃತದೇಹ ಮಣ್ಣು ಮಾಡಿದ!
ಮಹಿಳೆ ತನ್ನ ಗಂಡನಿಂದ ಪ್ರತ್ಯೇಕವಾಗಿದ್ದು, ಇದೀಗ ಕೆಲವು ಸಮಯದಿಂದ ಆರೋಪಿ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಳು. ಆದರೆ ಇಬ್ಬರ ನಡುವೆ ಕಿತ್ತಾಟವಾಗಿದ್ದು ಮಹಿಳೆಯನ್ನು ಕೊಲೆ ಮಾಡಿದ ಆರೋಪಿ ಮೃತದೇಹವನ್ನು ಮಣ್ಣು ಮಾಡಿದ್ದಾನೆ.
ಆದರೆ ಪೊಲೀಸರಿಗೆ ಅನಾಮಿಕ ಕರೆಯೊಂದು ಬಂದಿದ್ದು, ಈ ಸಾವಿನ ಬಗ್ಗೆ ಸುಳಿವು ಸಿಕ್ಕಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತದೇಹವನ್ನು ಮಣ್ಣು ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಇದು ಸಹಜ ಸಾವಾಗಿತ್ತು ಎಂದು ನಾಟಕವಾಡಲು ಯತ್ನಿಸಿದ್ದಾನೆ. ಆದರೆ ಪೊಲೀಸರು ಕೊನೆಗೂ ಸತ್ಯ ಬಯಲಿಗೆಳೆದು ಆರೋಪಿಯನ್ನು ಬಂಧಿಸಿದ್ದಾರೆ.