ನವದೆಹಲಿ: ಕೆಲಸ ಬಿಡುವಾಗ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಿಗೆ ಓರ್ವ ನೌಕರ ಬರೆದ ರಾಜೀನಾಮೆ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪತ್ರದಲ್ಲಿ ನಿಮ್ಮ ಸಂಬಳದಲ್ಲಿ ಫೋನ್ ಖರೀದಿಸಲೂ ಸಾಲುತ್ತಿಲ್ಲ ಎಂದು ಕಾರಣ ನೀಡಿದ್ದಾನೆ.
ರಾಹುಲ್ ಭೈರ್ವ ಎಂಬ ವ್ಯಕ್ತಿ ತನ್ನ ಮಾನವ ಸಂಪನ್ಮೂಲ ವಿಭಾಗದ (ಎಚ್ಆರ್) ಅಧಿಕಾರಿಗಳಿಗೆ ನೌಕರಿ ತ್ಯಜಿಸುತ್ತಿರುವ ಬಗ್ಗೆ ರಾಜೀನಾಮೆ ಪತ್ರ ಬರೆದಿದ್ದಾನೆ. ಈ ಪತ್ರದಲ್ಲಿ ಆತ ನೀಡಿರುವ ಕಾರಣ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಎರಡು ವರ್ಷ ನಿಮ್ಮ ಕಂಪನಿಗಾಗಿ ಕಠಿಣ ಪರಿಶ್ರಮ, ಕೆಲಸ ಮಾಡಿದರೂ ನನ್ನ ವೇತನ ಹೆಚ್ಚಳದ ಭರವಸೆ ವೇತನದಂತೇ ನಿಂತಲ್ಲೇ ನಿಂತಿದೆ ಎನಿಸತೊಡಗಿದೆ. ನಾನು iqoo 13 ಫೋನ್ ಪ್ರಿ ಬುಕ್ ಮಾಡಲು ಬಯಸಿದ್ದೆ. ಅದೂ ಕೇವಲ 51,999 ರೂ.ಗೆ ಆದರೆ ನಿಮ್ಮ ಈ ಸಂಬಳದಲ್ಲಿ ನನಗೆ ಆ ಫೋನ್ ಬುಕ್ ಮಾಡುವುದು ಅಸಾಧ್ಯವೆನಿಸುತ್ತಿದೆ. ಹೀಗಾಗಿ ಡಿಸೆಂಬರ್ 5 ನನ್ನ ಕೊನೆಯ ಕೆಲಸದ ದಿನ. ಮುಂದೆ ನಾನು ಇಲ್ಲಿ ಇದೇ ವೇತನಕ್ಕೆ ಕೆಲಸ ಮಾಡಲು ಇಷ್ಟಪಡುವುದಿಲ್ಲ ಎಂದು ವಿವರವಾಗಿ ರಾಹುಲ್ ಪತ್ರದಲ್ಲಿ ವಿವರಿಸಿದ್ದಾರೆ.
ಈ ರಾಜೀನಾಮೆ ಪತ್ರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜೀನಾಮೆ ನೀಡಲು ನೀಡಿದ ಕಾರಣ ಮಾತ್ರ ಮಸ್ತ್ ಆಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.