ಅಂತರ್ಜಾತಿ ವಿವಾಹವಾದರೆ ಸರಕಾರದಿಂದ 3 ಲಕ್ಷ ರೂಪಾಯಿಗಳು ದೊರೆಯುತ್ತವೆ ಎನ್ನುವ ನಂಬಿಕೆಯಿಂದ ವಿಧವೆಯನ್ನು ವಿವಾಹವಾಗಿದ್ದ ಯುವಕನೊಬ್ಬ ಸಹಾಯ ಧನ ದೊರೆಯುವುದಿಲ್ಲ ಎಂದು ತಿಳಿದ ಕೂಡಲೇ ಪತ್ನಿಯನ್ನು ಬಿಟ್ಟು ಪರಾರಿಯಾದ ಘಟನೆ ವರದಿಯಾಗಿದೆ.
ವಿಧವೆಗೆ ಬಾಳು ಕೊಡುವುದಾಗಿ ನಂಬಿಸಿ ದುಡ್ಡಿಗಾಗಿ ವಿಧವೆಯನ್ನು ಮದುವೆಯಾದ. ಅಂತರ್ಜಾತಿ ಮದುವೆಯಾದರೆ ಸಮಾಜಕಲ್ಯಾಣ ಇಲಾಖೆಯಿಂದ 3 ಲಕ್ಷ ರೂ. ಸಹಾಯಧನ ಬರುತ್ತದೆಂದು ನಂಬಿ ವಿಧವೆಯನ್ನು ಮದುವೆಯಾಗಿದ್ದ. ಬಳಿಕ ಆ ಇಲಾಖೆಗೆ ಹೋಗಿ ವಿಚಾರಿಸಿದ. ಎಸ್‌ಸಿ ಜಾತಿಯನ್ನು ಮದುವೆಯಾದರೆ ಮಾತ್ರ ಬರುತ್ತದೆಂದು ತಿಳಿದ ಮೇಲೆ ವಿಧವೆಯನ್ನು ಬಿಟ್ಟು ಆ ವ್ಯಕ್ತಿ ಓಡಿಹೋಗಿದ್ದಾನೆ.
ಪಾಟ್ನಾ ಜಿಲ್ಲೆಯ ವಿಧವೆ ಸೋನಂಳನ್ನು ಕದ್ದು ಮದುವೆಯಾಗಿ ಲೈಂಗಿಕವಾಗಿ ಬಳಸಿಕೊಂಡಿದ್ದ. ವ್ಯಕ್ತಿ ಮದುವೆ ಮಾಡಿಕೊಂಡ ಮೇಲೆ ಸೋನಂಳ ತಾಯಿ ಸೇರಿದಂತೆ ಕುಟುಂಬಸ್ಥರು ಚೆನ್ನಾಗಿ ಬೈಯ್ದು ಹೊಡೆದು, ರಿಜಿಸ್ಟರ್ ಮ್ಯಾರೇಜ್ ನೋಂದಣಿ ಮಾಡುವಂತೆ ತಿಳಿಸಿದ್ದರು.
ಆದರೆ ತನಗೆ ಸಹಾಯಧನ ಸಿಗುವುದಿಲ್ಲವೆಂದು ತಿಳಿದಮೇಲೆ ವಿಧವೆಯನ್ನು ಬಿಟ್ಟು ಓಡಿಹೋಗಿದ್ದಾನೆ. ನ್ಯಾಯಕ್ಕಾಗಿ ಡಿಸಿ ಕಚೇರಿ ಎಂದು ಗರ್ಭಿಣಿ ಧರಣಿ ಕುಳಿತಿದ್ದು, ನ್ಯಾಯಕ್ಕಾಗಿ ಮೊರೆ ಹೋಗಿದ್ದಾರೆ.