ಸರ್ಕಾರದ ಯೋಜನೆಗೋಸ್ಕರ ಅಣ್ಣ-ತಂಗಿಯನ್ನೇ ಮದುವೆಯಾದ!

ಗುರುವಾರ, 16 ಡಿಸೆಂಬರ್ 2021 (18:20 IST)
ಫಿರೋಜಾಬಾದ್ : ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ದೇಶದಾದ್ಯಂತ ಜನರು ಎಲ್ಲ ರೀತಿಯ ತಂತ್ರಗಳನ್ನು ಮಾಡುತ್ತಾರೆ.
 
ಅದರಂತೆ ಇಲ್ಲಿ ಅಣ್ಣ-ತಂಗಿ ಸರ್ಕಾರದ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಲು ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ.

ಡಿಸೆಂಬರ್ 11 ರಂದು ಫಿರೋಜಾಬಾದ್ನ ತುಂಡ್ಲಾದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಮದುವೆಯಾದ ಪ್ರತಿ ದಂಪತಿಗಳಿಗೆ ರಾಜ್ಯ ಸರ್ಕಾರ ಉಡುಗೊರೆಗಳನ್ನು ಹೊರತುಪಡಿಸಿ 35,000 ರೂ. ಅನ್ನು ಕೊಡುತ್ತದೆ.

ಈ ಯೋಜನೆಯ ಪ್ರಕಾರ, ವಧುವಿನ ಬ್ಯಾಂಕ್ ಖಾತೆಗೆ 20,000 ರೂ. ಠೇವಣಿ ಮಾಡಿ, 10,000 ರೂ. ಅನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಹಿನ್ನೆಲೆ ಇದೇ ಊರಿನ ಸಹೋದರ ತನ್ನ ಸ್ವಂತ ಸಹೋದರಿಯನ್ನು ಮದುವೆಯಾಗಿದ್ದು, ಈಗ ಬೆಳಕಿಗೆ ಬಂದಿದೆ.

ಫಿರೋಜಾಬಾದ್ನ ತುಂಡ್ಲಾದಲ್ಲಿ ವಿವಾಹ ನಡೆದಿದ್ದು, ಸ್ಥಳೀಯ ಗ್ರಾಮಸ್ಥರು ದಂಪತಿಯನ್ನು ಸಹೋದರ ಮತ್ತು ಸಹೋದರಿಯೆಂದು ಗುರುತಿಸಿದಾಗ ಸತ್ಯ ಬೆಳಕಿಗೆ ಬಂದಿದೆ. ಈವೆಂಟ್ನ ವೀಡಿಯೋಗಳು ಮತ್ತು ಫೋಟೋಗಳು ಪ್ರಸಾರವಾದ ನಂತರ, ಗ್ರಾಮಸ್ಥರು ಈ ಸಾಮೂಹಿಕವಾಗಿ ವಿವಾಹವಾದ ದಂಪತಿಗಳಲ್ಲಿ ಒಬ್ಬರನ್ನು ಸಹೋದರ ಮತ್ತು ಸಹೋದರಿ ಎಂದು ಗುರುತಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ