ಮಾಸ್ಕ್‌ ಕಡ್ಡಾಯ ನಿಯಮ ರದ್ದು!?

ಗುರುವಾರ, 17 ಫೆಬ್ರವರಿ 2022 (13:39 IST)
ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಮತ್ತಷ್ಟು ತಗ್ಗಿದೆ. ಪಾಸಿಟಿವಿಟಿ ದರ  ಶೇ.5ಕ್ಕಿಂತ ಕೆಳಕ್ಕಿಳಿದು, ಶೇ.3.47ರಷ್ಟು ದಾಖಲಾಗಿದೆ.
 
ಶುಕ್ರವಾರ 58,077 ಕೋವಿಡ್‌ ಕೇಸ್‌ಗಳು ದೃಢಪಟ್ಟಿವೆ. ಕರ್ನಾಟಕದಲ್ಲೂ ಪಾಸಿಟಿವಿಟಿ ದರ ಶೇ.3.47ಕ್ಕೆ ಇಳಿದಿದ್ದು, 3976 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್‌ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೂರದ ಸ್ವೀಡನ್‌ ಸರ್ಕಾರ ಸೋಂಕು ಪತ್ತೆ ಪರೀಕ್ಷೆಯನ್ನೇ ಕೈಬಿಟ್ಟಿದ್ದರೆ ಇತ್ತ ಮಹಾರಾಷ್ಟ್ರ ಸರ್ಕಾರ ರಾಜ್ಯದಲ್ಲಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಎಂಬ ನಿಯಮ ಕೈಬಿಡುವ ಬಗ್ಗೆ ಚಿಂತನೆ ನಡೆಸುತ್ತಿದೆ.

ಒಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ಅದು ಇಂಥ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಲಿದೆ.

ಈ ಕುರಿತು ಶುಕ್ರವಾರ ಮಾತನಾಡಿದ ರಾಜ್ಯದ ಆರೋಗ್ಯ ಸಚಿವ ಆರೋಗ್ಯ ಸಚಿವ ರಾಜೇಶ್‌ ಟೋಪೆ, ಬ್ರಿಟನ್‌ ಸೇರಿ ಇತರೆ ದೇಶಗಳಲ್ಲಿ ಈಗಾಗಲೇ ಜನರು ಮಾಸ್ಕ್‌ ಇಲ್ಲದೆ ಸ್ವತಂತ್ರವಾಗಿ ಓಡಾಡಲು ಅವಕಾಶ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ