‘ರಾಷ್ಟ್ರಗೀತೆ ಹಾಡಲಾಗದಿದ್ದರೆ, ಪಾಕಿಸ್ತಾನಕ್ಕೆ ಹೋಗಿ’

ಬುಧವಾರ, 1 ನವೆಂಬರ್ 2017 (10:29 IST)
ನವದೆಹಲಿ: ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಬೇಕೋ ಬೇಡವೋ ಎಂಬ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಜೈಪುರ ಮಹಾನಗರ ಪಾಲಿಕೆ ಮೇಯರ್ ತಮ್ಮ ಅಧಿಕಾರಿಗಳಿಗೆ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದಾರೆ.

 
ರಾಷ್ಟ್ರಗೀತೆ ಹಾಡಲು ಆಗದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಮೇಯರ್ ಅಶೋಕ್ ಲೆಹೋಟಿ ಖಡಕ್ ಆದೇಶ ನೀಡಿದ್ದಾರೆ. ಅದರಂತೆ ಕಚೇರಿಯಲ್ಲಿ ಪ್ರತಿ ದಿನ 9.50 ಕ್ಕೆ ರಾಷ್ಟ್ರಗೀತೆ ಮತ್ತು ಸಂಜೆ 5.55 ಕ್ಕೆ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿದ್ದಾರೆ.

ಆದರೆ ಪಾಕಿಸ್ತಾನಕ್ಕೆ ಹೋಗಿ ಎಂದು ನೇರವಾಗಿ ನಾನು ಹೇಳಿಲ್ಲ ಎಂದು ಮೇಯರ್ ಹೇಳಿದ್ದಾರೆ. ಯಾರೋ ಒಬ್ಬರು ತಮಾಷೆಗೆ ಆದೇಶ ಪಾಲಿಸದಿದ್ದರೆ ಏನು ಮಾಡುತ್ತೀರಿ ಎಂದು ಕೇಳಿದಾಗ ಇದು ಪಾಕಿಸ್ತಾನವಲ್ಲ ಎಂದಿದ್ದೇನಷ್ಟೇ ಎಂದಿದ್ದಾರೆ. ಈ ರೀತಿ ರಾಷ್ಟ್ರಗೀತೆ ಹಾಡುವುದರಿಂದ ಶಿಸ್ತು ಬೆಳೆಯುತ್ತದೆ ಎಂಬುದು ಮೇಯರ್ ಉದ್ದೇಶವಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ