ಹನಿಮೂನ್ ಮರ್ಡರ್ ಕೇಸ್ ಗೆ ಬಿಗ್ ಟ್ವಿಸ್ಟ್: ಸೋನಂ ಎರಡನೇ ಮದುವೆ
ಮೇ 23 ರಂದು ರಾಜ ರಘುವಂಶಿ ಮೇಘಾಲಯದಲ್ಲಿ ನಾಪತ್ತೆಯಾಗಿದ್ದ. ಅದಾದ 10 ದಿನದ ಬಳಿಕ ಆತನ ಮೃತದೇಹ ಮೇಘಾಲಯದ ಕಮರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಸೋನಂ ನಾಪತ್ತೆಯಾಗಿದ್ದಳು. ಮೃತದೇಹ ಸಿಕ್ಕ ಬೆನ್ನಲ್ಲೇ ರಾಜ ರಘುವಂಶಿಯ ಹಂತಕರ ಪೈಕಿ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇದರ ಬೆನ್ನಲ್ಲೇ ಸ್ವತಃ ಪತ್ನಿ ಸೋನಂಳೇ ಈ ಕೃತ್ಯವೆಸಗಿದ್ದು ಪತ್ತೆಯಾಗಿತ್ತು. ಬಳಿಕ ಸೋನಂ ಹಾಗೂ ಆಕೆಯ ಪ್ರಿಯಕರ ರಾಜ್ ಕುಶ್ವಾಹನನ್ನೂ ಪೊಲೀಸರು ಬಂಧಿಸಿದ್ದರು.
ಇದೀಗ ರಾಜ ರಘುವಂಶಿಯ ಸಹೋದರ ಸೋನಂ ಬಗ್ಗೆ ದೊಡ್ಡ ಆರೋಪ ಮಾಡಿದ್ದಾನೆ. ಸೋನಂಳಿಂದ ಎರಡು ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಮದುವೆ ಸಮಯದಲ್ಲಿ ರಾಜ ರಘುವಂಶಿ ಕಡೆಯಿಂದ ಸಿಕ್ಕಿದ್ದು. ಇನ್ನೊಂದು ಮಾಂಗಲ್ಯ ಸರ ಕೊಲೆ ನಡೆದ ಬಳಿಕ ಆಕೆ ಪ್ರಿಯಕರನ ಜೊತೆ ಎರಡನೇ ಮದುವೆಯಾಗಿರಬಹುದು. ಈ ತಾಳಿಸರ ಅದೇ ಇರಬೇಕು ಎಂದು ವಿಪಿನ್ ಆರೋಪಿಸಿದ್ದಾರೆ. ಇದೀಗ ವಿಪಿನ್ ಆರೋಪ ನಿಜವೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಬೇಕಿದೆ.