ಪತಿಯನ್ನು ಮರಳಿ ಬರುವಂತೆ ಮಾಡುತ್ತೇನೆ ಎಂದು ಮಹಿಳೆಯ ಮೇಲೆ ಮಾನಭಂಗ ಎಸಗಿದ ಮಾಂತ್ರಿಕ
ಸೋಮವಾರ, 8 ಮಾರ್ಚ್ 2021 (07:13 IST)
ಅಹಮದಾಬಾದ್ : ಮಹಿಳೆಗೆ ಸುಳ್ಳು ಭರವಸೆ ನೀಡಿ ಮಾಟಗಾರನೊಬ್ಬ ಆಕೆಯ ಮೇಲೆ ಮಾನಭಂಗ ಎಸಗಿದ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.
ಮಹಿಳೆಯ ಪತಿ ಬಿಟ್ಟು ಹೋದ ಕಾರಣ ಮಾಟಗಾರ ಆಕೆಯ ಪತಿಯನ್ನು ವಾಪಾಸು ಬರುವಂತೆ ಮಾಡುವುದಾಗಿ ಹಲವು ಬಗೆಯ ತಂತ್ರಗಳನ್ನು ಮಾಡುತ್ತಿದ್ದ. ಬಳಿಕ ಆಕೆಯನ್ನು ಹೋಟೆಲ್ ಗೆ ಕರೆದು ಅಲ್ಲಿ ಮಾನಭಂಗ ಎಸಗಿದ, ಅಷ್ಟೇ ಅಲ್ಲದೇ ಅದನ್ನು ವಿಡಿಯೋ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲೆ ಮಾಡಿದ.
ಇದರಿಂದ ನೊಂದ ಮಹಿಳೆ ನಿದ್ರೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.