ದೇಹಬಾಧೆ ತೀರಿಸಲು ಹೋದ ಯುವತಿಯ ಮಾನಭಂಗ

ಶುಕ್ರವಾರ, 30 ಅಕ್ಟೋಬರ್ 2020 (10:28 IST)
ವಡೋದರ: ದೇಹಬಾಧೆ ತೀರಿಸಲೆಂದು ಮಧ್ಯರಾತ್ರಿ ಮನೆಯಿಂದ ಹೊರಗೆ ಬಂದ ಅಪ್ರಾಪ್ತ ಯುವತಿಯನ್ನು ದುರುಳರು ಮಾನಭಂಗ ಮಾಡಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಯುವತಿ ತಂದೆಯೊಡನೆ ತನ್ನ ಸಂಬಂಧಿಕರ ಮನೆಗೆ ಹೋಗಿದ್ದಳು. ರಾತ್ರಿ ವೇಳೆ ಅಲ್ಲಿಯೇ ಇಬ್ಬರೂ ತಂಗಿದ್ದರು. ಮಧ್ಯರಾತ್ರಿ ಸುಮಾರು 1.30 ರ ಸುಮಾರಿಗೆ ಬಹಿರ್ದೆಸೆ ತೀರಿಸಲು ಹೋದ ಯುವತಿಯನ್ನು ಹಿಂದಿನಿಂದ ಬಂದು ಹಿಡಿದುಕೊಂಡ ಆರೋಪಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾನಭಂಗ ಮಾಡಿದ್ದಾನೆ. ಆರೋಪಿಯ ಜತೆಗೆ ಇಬ್ಬರು ಸಂಗಡಿಗರೂ ಇದ್ದರು ಎನ್ನಲಾಗಿದೆ. ಸಂತ್ರಸ್ತೆ ಜೋರಾಗಿ ಕೂಗಿಕೊಂಡಾಗ ಎಲ್ಲರೂ ಪರರಾರಿಯಾಗಿದ್ದಾರೆ. ಆದರೆ ಈಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ