ಭೋಪಾಲ್ : ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಧ್ಯಪ್ರದೇಶದ ಇಂದೋರ್ನಲ್ಲಿ ಪುರಸಭೆಯ ಘನ ತ್ಯಾಜ್ಯ ಆಧಾರಿತ ಗೋಬರ್-ಧನ್(ಬಯೋ-ಸಿಎನ್ಜಿ) ಸ್ಥಾವರವನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ.
ಇಂದೋರ್ನ ಪುರಸಭೆಯ ಘನತ್ಯಾಜ್ಯ ಆಧಾರಿತ ಗೋಬರ್-ಧನ್ ಸ್ಥಾವರವನ್ನು ಉದ್ಘಾಟಿಸಿದ ಮೋದಿ ದೇಶದ 75 ದೊಡ್ಡ ನಾಗರಿಕ ಸಂಸ್ಥೆಗಳಲ್ಲಿ ಗೋಬರ್-ಧನ್ ಸ್ಥಾವರದಂತಹ ಜೈವಿಕ-ಸಿಎನ್ಜಿ ಸ್ಥಾವರಗಳನ್ನು ನಿರ್ಮಿಸುವ ಕೆಲಸ ನಡೆಯುತ್ತಿದೆ ಎಂಬುದು ನನಗೆ ಸಂತೋಷವಾಗಿದೆ.
ಮುಂದಿನ 2 ವರ್ಷಗಳಲ್ಲಿ ಈ ಉಪಕ್ರಮದಿಂದ ದೇಶದ ನಗರಗಳನ್ನು ಸ್ವಚ್ಛ, ಮಾಲಿನ್ಯ ಮುಕ್ತಗೊಳಿಸಲು ಹಾಗೂ ಅವುಗಳನ್ನು ಶುದ್ಧ ಶಕ್ತಿಯತ್ತ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ಹೇಳಿದರು.