ಪಡಿತರ ವಿತರಣಾ ವ್ಯವಸ್ಥೆಯನ್ನ ರದ್ದು ಮಾಡಿ ಎಲ್`ಪಿಜಿ ಸಬ್ಸಿಡಿ ರೀತಿ ಫಲಾನುಭವಿಗಳ ಖಾತೆಗೇ ನೇರವಾಗಿ ಹಣ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸ್ವತಃ ಪ್ರಧಾನಮಂತ್ರಿ ನರೇಂದ್ರಮೋದಿ ಸಂಸದರ ಸಭೆಯಲ್ಲಿ ಈ ಪ್ರಸ್ತಾಪ ಇಟ್ಟಿದ್ದಾರೆ. ಪುದುಚೇರಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಜಾರಿಯಲ್ಲಿರುವ ಈ ಯೋಜನೆ ಯಶಸ್ಸು ಕಂಡಿದೆ. ಹೀಗಾಗಿ, ದೇಶಾದ್ಯಂತ ವಿಸ್ತರಣೆ ಚಿಂತನೆ ನಡೆಸಿದ್ದಾರೆ. ಪಡಿತರ ವಿತರಣೆಯಲ್ಲಾಗುವ ಅವ್ಯವಹಾರ ತಡೆಯಲು ಈ ಕ್ರಮ ರಾಮಬಾಣ ಎನ್ನಲಾಗುತ್ತಿದೆ.
ಚಂಢೀಗಡ ಮತ್ತು ಹರ್ಯಾಣದಲ್ಲಿ ಸೀಮೆಎಣ್ಣೆ ಮುಕ್ತವಾಗಿರುವುದರಿಂದ ಅಲ್ಲಿ ವಿತರಣೆಯಲ್ಲಿ ಕಂಡುಬರುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿದೆ. ಅದೇ ರೀತಿ ಪಡಿತರ ವ್ಯವಸ್ಥೆ ಸುಧಾರಣೆಗೆ ಕೇಂದ್ರ ಚಿಂತನೆ ನಡೆಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ