ವಿಹಾರ ನೌಕೆ `ಎಂವಿ ಗಂಗಾ ವಿಲಾಸ್’ ಕ್ರೂಸ್ಗೆ ಮೋದಿ ಅದ್ಧೂರಿ ಚಾಲನೆ

ಶುಕ್ರವಾರ, 13 ಜನವರಿ 2023 (15:41 IST)
ಲಕ್ನೋ : ವಿಶ್ವದ ಅತೀ ಉದ್ದದ ನದಿ ವಿಹಾರದ `ಎಂವಿ ಗಂಗಾ ವಿಲಾಸ್’ ಕ್ರೂಸ್ ಹಡಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ನಲ್ಲಿ ಹಸಿರು ನಿಶಾನೆ ತೋರಿದ್ದಾರೆ.
 
ಇದಕ್ಕೂ ಮುನ್ನ ವಾರಾಣಸಿಯಲ್ಲಿ ಗಂಗಾ ನದಿ ತೀರದಲ್ಲಿ ನಿರ್ಮಿಸಲಾಗಿರುವ `ಟೆಂಟ್ ಸಿಟಿ’ಯನ್ನೂ ಉದ್ಘಾಟಿಸಿದ್ದಾರೆ. 1,000 ಕೋಟಿಗೂ ಅಧಿಕ ವೆಚ್ಚದ ವಿವಿಧ ಜಲಸಾರಿಗೆ ಯೋಜನೆಗಳಿಗೆ ಶಿಲಾನ್ಯಾಸವನ್ನೂ ನೆರವೇರಿಸಿದ್ದಾರೆ. 

ಇಂದು ಗಂಗಾ ವಿಲಾಸ್ ನದಿ ಪ್ರವಾಸಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಗಂಗಾ ನದಿಯಲ್ಲಿ ಕ್ರೂಸ್ ಸೇವೆ ಆರಂಭವಾಗುತ್ತಿರುವುದು ಐತಿಹಾಸಿಕ ಕ್ಷಣ. ಇದು ಭಾರತದಲ್ಲಿ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡಲಿದೆ. ವಿದೇಶಿ ಪ್ರವಾಸಿಗರು ಈ ಸೇವೆ ಪಡೆಯುವ ಮೂಲಕ ಭಾರತದ ವೈಭವವನ್ನು ಆಸ್ವಾದಿಸಬೇಕು.

ಇದರಿಂದ ನದಿ ವಿಹಾರ ಪ್ರವಾಸೋದ್ಯಮ ಉತ್ತೇಜನಗೊಳ್ಳಲಿದೆ. ಜೊತೆಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ದೇಶದ ವಿವಿಧ ಭಾಗಗಳಲ್ಲೂ ಹೆಚ್ಚಿನ ನದಿ ವಿಹಾರ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ