ಇರಾನ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ಇರಾನ್ ದೇಶದ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮೆನೈ ಅವರನ್ನು ಭೇಟಿ ಮಾಡಲಿದ್ದಾರೆ, ಇರಾನ್ ಅಧ್ಯಕ್ಷ ಹಸನ್ ರೌಹಾನಿಯವರನ್ನು ಕೂಡಾ ಭೇಟಿ ಮಾಡಿ ಉಭಯ ದೇಶದಗಳ ಭಾಂಧವ್ಯ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಿದ್ದಾರೆ ಎನ್ನಲಾಗಿದೆ.
ಇರಾನ್‌ನ ಆಗ್ನೇಯ ಕರಾವಳಿ ತೀರದಲ್ಲಿ ಬಂದರು ನಿರ್ಮಾಣಕ್ಕೆ ಇರಾನ್ ಮತ್ತು ಭಾರತ ದೇಶಗಳು ವಾಣಿಜ್ಯ ಒಪ್ಪಂದಕ್ಕೆ ಸಹಿಹಾಕಲಿವೆ. ಇಂಧನ, ವಹಿವಾಟು ಮತ್ತು ಸಂಪರ್ಕ ಕ್ಷೇತ್ರಗಳ ಬಗ್ಗೆ ಮೋದಿ ಚರ್ಚೆ ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಇರಾನ್ ಭೇಟಿಯಿಂದಾಗಿ ಮೂಲಸೌಕರ್ಯ, ಇಂಧನ, ವಹಿವಾಟು ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯ ಲಾಭವಾಗಲಿದೆ ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ.