ತೃತೀಯ ರಂಗವನ್ನು ರಚಿಸಲು ಹೊರಟಿದ್ದ ಸಮಾಜವಾದಿ ನಾಯಕ ಮುಲಾಯಂ ಸಿಂಗ್ ಯಾದವ್ ಪ್ರಯತ್ನ ನಾಯಕರ ಸ್ವಾಭಿಮಾನಗಳ ಭಾರಕ್ಕೆ ಕುಸಿದು ಹೋಯಿತು. ತಮಿಳುನಾಡು ಮುಖ್ಯಮಂತ್ರಿ ಜೆ ಜಯಲಲಿತಾ ತನ್ನದೇ ಆದ ಒಂದು ಹಾದಿಯನ್ನು ತುಳಿದರೇ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ "ಏಕಾಂಗಿ ನಡೆ" (ವಾಕ್ ಅಲೋನ್) ತತ್ವವನ್ನು ಅನುಸರಿಸಿದರು. ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ನಾಮನಿರ್ದೇಶನದ ನಂತರ ಬಿಜೆಪಿ ಜತೆ ಸಂಬಂಧಗಳನ್ನು ಕಡಿದುಕೊಳ್ಳುವ ಮೂಲಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜಾತ್ಯತೀತತೆ ಚಾಂಪಿಯನ್ ಆಗ ಹೊರಟಿದ್ದರು.
ಬಿಹಾರದಲ್ಲಿ ಮೇಲುಗೈ ಸಾಧಿಸಲು ಜಾತ್ಯಾತೀತ ಮನೋಭಾವದ ಪ್ರತಿಸ್ಪರ್ಧಿ ಲಾಲು ಪ್ರಸಾದ್ ಜೊತೆ ಕೈ ಮಿಲಾಯಿಸಲು ಕುಮಾರ್ ಸಿದ್ಧರಾದರು. ಎರಡೂ ಪಕ್ಷಗಳ ಬೆಂಬಲಿಗರು ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಂಡಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ, ಎಡಪಕ್ಷಗಳೊಂದಿಗೆ ವೀಲಿನಗೊಳ್ಳಬೇಕು ಎನ್ನುವುದು ವಾಸ್ತವತೆಗೆ ವಿರೋಧವಾಗಿತ್ತು. ಮುಸ್ಲಿಂ ಓಟ್ ಬ್ಯಾಂಕಿಂಗ್ ನಂಬಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್‌ಪಿ ನಾಯಕಿ ಮಾಯಾವತಿ ಕೂಡಾ ತಮ್ಮ ಸಾಂಪ್ರದಾಯಿಕ ಎದುರಾಳಿಯಾದ ಮುಲಾಯಂ ಜೊತೆ ವೇದಿಕೆ ಹಂಚಿಕೊಳ್ಳುವಲ್ಲಿ ವಿಫಲವಾಗಿ ತೃತಿಯ ರಂಗ ಆರಂಭದಲ್ಲಿಯೇ ಅವನತಿಯತ್ತ ಸಾಗಿತ್ತು.