ಹೆತ್ತ ಕರುಳ ಕೂಗಿಗೆ ಓಗೊಟ್ಟ ಉಗ್ರ ಮಾಡಿದ್ದೇನು?

ಶನಿವಾರ, 5 ನವೆಂಬರ್ 2016 (11:07 IST)
ಜಿಹಾದಿಗಳ ಪ್ರಭಾವಕ್ಕೆ ಒಳಗಾಗಿ ಮನೆ ತೊರೆದು ಭಯೋತ್ಪಾದಕ ಸಂಘಟನೆ ಸೇರಿದ್ದ ಉಗ್ರನೊಬ್ಬ ತಾಯಿಯ ಮಾತಿಗೆ ಮಣಿದು ಸಾಮಾನ್ಯ ಬದುಕಿಗೆ ಮರಳಿದ್ದಾನೆ.
 
ಜಮ್ಮು ಮತ್ತು ಕಾಶ್ಮೀರದ ನಿವಾಸಿ  ಉಮರ್ ಖಾಲಿಕ್ ಮಿರ್ ಅಲಿಯಾಸ್ ಸಮೀರ್(26) ಕಳೆದ ಮೇ ತಿಂಗಳಲ್ಲಿ ಮನೆ ಬಿಟ್ಟಿದ್ದ. ಲಷ್ಕರ್ ಸಂಘಟನೆ ಸೇರಿದ್ದ ಆತ ಇತ್ತೀಚಿಗೆ ಉತ್ತರ ಕಾಶ್ಮೀರದ  ಸೋಪೋರ್‌ನ ಮನೆಯಲ್ಲಿ ಅಡಗಿದ್ದ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಸಿಕ್ಕಿತ್ತು.  ಆತನನ್ನು ಸೆರೆ ಹಿಡಿಯಲು ಗುರುವಾರ ಬಿಎಸ್ಎಫ್ ಯೋಧರು ಕಾರ್ಯಾಚರಣೆಗೆ ಮುಂದಾದರು. ಈ ಮಾಹಿತಿ ದೊರೆಯುತ್ತಿದ್ದಂತೆ ಸಮೀಪದ ತುಜ್ಞರ್‌ನಲ್ಲಿ ವಾಸವಾಗಿದ್ದ ಆತನ ಪೋಷಕರು ಅಲ್ಲಿಗೆ ಧಾವಿಸಿದ್ದಾರೆ. 
 
ಆತ ಅಡಗಿದ್ದ ಮನೆ ಒಳಕ್ಕೆ ಹೋದ ತಾಯಿ  ಸತತ 2 ಗಂಟೆ ಕಾಲ ಆತನ ಜತೆ ಮಾತನಾಡಿ ಮನವೊಲಿಸಿದ್ದಾಳೆ. ಹೆತ್ತ ಕರುಳ ಕೂಗಿಗೆ ಓಗೊಟ್ಟ ಸಮೀರ್ ಸಾಮಾನ್ಯ ಜೀವನಕ್ಕೆ ಮರಳಲು ಮುಂದಾಗಿದ್ದಾನೆ. 
 
ಅಮ್ಮನ ಮಾತಿನಂತೆ ತನ್ನ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಭದ್ರತಾ ಪಡೆಗೆ ಶರಣಾಗಿದ್ದಾನೆ. ನಿಜಕ್ಕೂ ಇದೊಂದು ಭಾವನಾತ್ಮಕ ಸನ್ನಿವೇಶವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ