ಅತ್ಯಾಚಾರ ಕೇಸ್ ವಾಪಸ್ ಪಡೆಯಲು 50 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಅಮ್ಮ-ಮಗಳು!

ಶುಕ್ರವಾರ, 24 ಜೂನ್ 2022 (09:00 IST)
ಗುರ್ಗಾಂವ್: ಇತ್ತೀಚೆಗೆ ಮಹಿಳೆಯರ ಪರವಾಗಿರುವ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳೂ ಹೆಚ್ಚುತ್ತಿವೆ. ಅದೇ ರೀತಿ ಅತ್ಯಾಚಾರ ಪ್ರಕರಣ ದಾಖಲಿಸಿ ಹಣ ಪೀಕಲು ಹೊರಟಿದ್ದ ಅಮ್ಮ-ಮಗಳ ನಾಟಕವನ್ನು ಪೊಲೀಸರು ಬಯಲು ಮಾಡಿದ್ದಾರೆ.

ತಾಯಿ ಮತ್ತು ಮಗಳು ವ್ಯಕ್ತಿಯೊಬ್ಬರ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಸುಳ್ಳು ಆರೋಪ ಹೊರಿಸಿದ್ದರು. ದೂರು ವಾಪಸ್ ಪಡೆಯಲು 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಅದರಂತೆ 1 ಲಕ್ಷ ಹಣ ಪಡೆದುಕೊಂಡಿದ್ದರು.

ಆದರೆ ಈ ಬಗ್ಗೆ ಸ್ವತಃ ಯುವತಿಯ ಸಹೋದರನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಅದರಂತೆ ಪೊಲೀಸರು ಹಣದ ಡೀಲ್ ನಡೆಸುವುದಾಗಿ ಹೇಳಿ ಅಮ್ಮ-ಮಗಳನ್ನು ನಂಬಿಸಿ ಹೋಟೆಲ್ ಒಂದಕ್ಕೆ ಕರೆಸಿಕೊಂಡು ರೆಡ್ ಹ್ಯಾಂಡ್ ಆಗಿ ಅರೆಸ್ಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ