ಮಗ ಸತ್ತ ಮೇಲೆ ಸೊಸೆ ಚೆಲ್ಲಾಟ: ರುಂಡ ಕತ್ತರಿಸಿದ ಅತ್ತೆ
ಗಂಡನ ಸಾವಿನ ಬಳಿಕ ಸೊಸೆ ಅಕ್ರಮ ಸಂಬಂಧ ಹೊಂದಿದ್ದಳು. ಸೊಸೆ ಇಬ್ಬರು ಮಕ್ಕಳೊಂದಿಗೆ ಅತ್ತೆಯೊಂದಿಗೆ ಒಂದೇ ಮನೆಯಲ್ಲಿ ವಾಸವಿದ್ದಳು. ಆದರೆ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿತ್ತು.
ತನ್ನ ಆಸ್ತಿಯನ್ನು ಸೊಸೆ ಎಲ್ಲಿ ಪ್ರಿಯಕರನಿಗೆ ಕೊಟ್ಟು ಬಿಡುತ್ತಾಳೋ ಎಂಬ ಆತಂಕದಿಂದ ಅತ್ತೆ ಸೊಸೆಯ ರುಂಡ ಕತ್ತರಿಸಿ ಕೊಲೆ ಮಾಡಿದ್ದಾಳೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.