15 ವರ್ಷದ ಹುಡುಗನೊಂದಿಗೆ ಓಡಿ ಹೋದ ಮೂವರು ಮಕ್ಕಳ ತಾಯಿ

ಮಂಗಳವಾರ, 16 ಮಾರ್ಚ್ 2021 (10:13 IST)
ಗೋರಖ್ ಪುರ: ಮೂವರು ಮಕ್ಕಳ ತಾಯಿಯೆನಿಸಿಕೊಂಡ ಮಹಿಳೆ 15 ವರ್ಷದ ಅಪ್ರಾಪ್ತ ಹುಡುಗನೊಂದಿಗೆ ಓಡಿ ಹೋದ ಘಟನೆ ಗೋರಖ್ ಪುರದಲ್ಲಿ ನಡೆದಿದೆ.


ಈ ಸಂಬಂಧ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈಗ ಓಡಿ ಹೋದ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದುವರೆಗೆ ಅವರು ಪತ್ತೆಯಾಗಿಲ್ಲ. ಕಳೆದ ಒಂದು ವರ್ಷದಿಂದ ಇಬ್ಬರೂ ಸಂಬಂಧ ಹೊಂದಿದ್ದರು. ಆದರೆ ಇಬ್ಬರ ನಡುವೆ ವಯಸ್ಸಿನ ಅಂತರವಿದ್ದರಿಂದ ಯಾರೂ ಇವರ ಬಗ್ಗೆ ಅನುಮಾನ ಹೊಂದಿರಲಿಲ್ಲ.

ಇದೀಗ ಮಹಿಳೆಯ ಮಕ್ಕಳು ಆಕೆಯ ಪತಿಯೊಂದಿಗಿದ್ದಾರೆ. ಆಕೆಯ ಪತಿ ಕೂಡಾ ಕಳೆದ ಕೆಲವು ಸಮಯದಿಂದ ಪತ್ನಿಯ ವರ್ತನೆಯಲ್ಲಿ ಬದಲಾವಣೆ ಗಮನಿಸಿದ್ದೆ. ಆದರೆ ಇಂತಹದ್ದೊಂದು ಸಂಬಂಧವಿರಬಹುದು ಎಂದರೆ ನಂಬಲಾಗುತ್ತಿಲ್ಲ ಎಂದಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ