ನ್ಯಾಷನಲ್ ಹೆರಾಲ್ಡ್ ಕೇಸ್: ಸೋನಿಯಾ, ರಾಹುಲ್ ವಿರುದ್ಧ ಹೈಕೋರ್ಟ್‌ನಲ್ಲಿ ಕೇಸ್ ದಾಖಲು

ಮಂಗಳವಾರ, 24 ಮೇ 2016 (15:58 IST)
ಭೋಪಾಲ್ ಅಭಿವೃದ್ಧಿ ಪ್ರಾಧೀಕಾರ ನ್ಯಾಷನಲ್‌ ಹೆರಾಲ್ಡ್‌ಗೆ ಭೂಮಿ ನೀಡಿರುವ ಕುರಿತಂತೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಮೋತಿಲಾಲ್ ವೋರಾ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಕೋರಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ ವಿಚಾರಣೆಗಾಗಿ ಸ್ವೀಕರಿಸಿದೆ.
    
ಕಳೆದ 1981ರಲ್ಲಿ ನ್ಯಾಷನಲ್‌ ಹೆರಾಲ್ಡ್‌ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ನಗರದ ಮಧ್ಯ ಭಾಗದಲ್ಲಿ ಭೂಮಿಯನ್ನು 30 ವರ್ಷಗಳ ಅವಧಿಗೆ ಲೀಸ್‌ನಂತೆ ನೀಡಲಾಗಿತ್ತು. ಏತನ್ಮಧ್ಯೆ, ಅಸೋಸಿಯೇಟ್ ಜರ್ನಲ್ಸ್‌ನಿಂದ ಶೇರುಗಳನ್ನು ಪಡೆದ ಯಂಗ್ ಇಂಡಿಯಾ ಸಂಸ್ಥೆ ಭೂಮಿಯ ಕೆಲ ಭಾಗವನ್ನು ಮಾರಾಟ ಮಾಡಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ದೂರು ದಾಖಲಿಸಲಾಗಿದೆ. 
 
ಭೋಪಾಲ್ ಅಭಿವೃದ್ಧಿ ಪ್ರಾಧೀಕಾರದ ಅನುಮತಿಯಿಲ್ಲದೇ ಯಂಗ್ ಇಂಡಿಯಾ ಸಂಸ್ಥೆ ಮಾರಾಟ ಮಾಡಿರುವುದು ಕಾನೂನುಬಾಹಿರ ಎಂದು ಭೋಪಾಲ್ ಮೂಲದ ಆರ್‌.ಕೆ.ಶರ್ಮಾ ಎನ್ನುವವರು ದಾಖಲಿಸಿದ ಪಿಐಎಲ್‌ನಲ್ಲಿ ಆರೋಪಿಸಿದ್ದಾರೆ.
 
ಕಳೆದ 2011ರಲ್ಲಿ ಲೀಸ್ ಅವಧಿ ಅಂತ್ಯಗೊಂಡಿದ್ದರೂ 1.14 ಏಕರೆ ಭೂಮಿಯನ್ನು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸಂಸ್ಥೆ ಖಾಲಿ ಮಾಡಿಲ್ಲ ಎಂದು ಭೋಪಾಲ್ ಅಭಿವೃದ್ಧಿ ಪ್ರಾಧೀಕಾರ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿದೆ.   

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ