ನವದೆಹಲಿ :ಹಫೀಜ್ ಸೈಯದ್ ಗೆ ವಿವಿಧ ಭಯೋತ್ಪಾದನಾ ಪ್ರಕರಣದಲ್ಲಿ 78 ವರ್ಷ ಸೆರೆವಾಸ ವಿಧಿಸಲಾಗಿದ್ದು, ಆತ ಜೀವಮಾನವಿಡೀ ಜೈಲಿನಲ್ಲಿ ಸುರಕ್ಷಿತವಾಗಿ ಕಳೆಯಲಿದ್ದಾನೆ ಎಂದು ವರದಿಯಾಗಿದೆ.ಮುಂಬೈನಲ್ಲಿ ನಡದಿದ್ದ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಭಯೋತ್ಪಾದನಾ ಸಂಘಟನೆ ಜಮಾತ್ ಉದ್ ದಾವಾಹ್ ನಾಯಕ ಹಫೀಜ್ ಸೈಯದ್ ಸದ್ಯಕ್ಕೆ ಪಾಕಿಸ್ತಾನ ಜೈಲಿನಲಿದ್ದಾನೆ ಎಂದು ವಿಶ್ವಸಂಸ್ಥೆ ಬಹಿರಂಗ ಪಡಿಸಿದೆ.
ಭಾರತ ಹಫೀಜ್ ನನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಹಲವು ಬಾರಿ ಮನವಿ ಸಲ್ಲಿಸಿತ್ತು. ಹಫೀಜ್ ಸೈಯದ್ ನನ್ನು ವಿಶ್ವಸಂಸ್ಥೆಯು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿದ್ದು, ಹಲವು ದೇಶಗಳಲ್ಲಿ ಆತ ಭಯೋತ್ಪಾದನಾ ಕೃತ್ಯ ನಡೆಸಿ ನೂರಾರು ಅಮಾಯಕರ ಜೀವಕ್ಕೆ ಎರವಾಗಿದ್ದಾನೆಂದು ದಾಖಲೆಗಳ ಸಹಿತ ಬಹಿರಂಗಪಡಿಸಿದೆ.