ನವದೆಹಲಿ : ಭಾರತದಲ್ಲಿ ವಾಸಿಸುವ ಮುಸ್ಲಿಮರು ತಮ್ಮ ಸಂವಿಧಾನದ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಸಹ ನಾಗರಿಕರೊಂದಿಗೆ ಸಹೋದರ ಸಂಬಂಧವನ್ನು ಹೊಂದಿದ್ದಾರೆ ಎಂದು ವಿಶ್ವ ಮುಸ್ಲಿಂ ವರ್ಲ್ಡ್ ಲೀಗ್ ಮುಖ್ಯಸ್ಥ ಡಾ. ಮೊಹಮ್ಮದ್ ಬಿನ್ ಅಬ್ದುಲ್ಕರೀಮ್ ಅಲ್ ಇಸ್ಸಾ ಹೇಳಿದ್ದಾರೆ.
ಅಲ್ ಇಸ್ಸಾ ಅವರು ಭಾರತಕ್ಕೆ ಭೇಟಿ ನೀಡಿದ ಹಾಗೂ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಿದ ಕುರಿತು ಮಾತನಾಡಿದ್ದಾರೆ. ಕೆಲ ಭಿನ್ನಾಭಿಪ್ರಾಯಗಳು ದೇಶದಲ್ಲಿ ಇರಬಹುದು. ಆ ಸಮಸ್ಯೆಗಳನ್ನು ಸಂವಿಧಾನದೊಳಗೆ ಅವರು ಹಂಚಿಕೊಳ್ಳುವ ಪ್ರೀತಿ ಹಾಗೂ ಸಹೋದರತ್ವದ ಚೌಕಟ್ಟಿನಲ್ಲಿ ಚರ್ಚಿಸಬೇಕು ಎಂದು ತಿಳಿಸಿದರು.
ಸಹಜವಾಗಿ ಭಾರತದ ಭೇಟಿ ನಮ್ಮ ಸ್ನೇಹಿತರ ಭೇಟಿಯಾಗಿದೆ. ಈ ಭೇಟಿಯ ಬಗ್ಗೆ ನನಗೆ ತುಂಬಾ ಸಂತೋಷವಿದೆ. ಈ ಭೇಟಿಯ ಸಂದರ್ಭದಲ್ಲಿ ಬಹಳ ಮುಖ್ಯವಾದ ಸಭೆಗಳನ್ನು ನಡೆಸಿದ್ದೇವೆ. ಅಲ್ಲಿನ ರಾಜಕೀಯ ನಾಯಕರನ್ನು ಹಾಗೂ ಧಾರ್ಮಿಕ ನಾಯಕರನ್ನು ಭೇಟಿಯಾಗಿ ನನಗೆ ತುಂಬಾ ಸಂತೋಷವಾಗಿದೆ. ಸಮಾಜದ ಸಾಮರಸ್ಯ ಹಾಗೂ ಪ್ರಪಂಚದ ಶಾಂತಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳನ್ನು ನಾವು ಚರ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.