ಅತ್ತಿಗೆಯನ್ನೇ ಮದುವೆಯಾಗಿ ಹೊಸ ಜೀವನ ನೀಡಿದ ಮೈದುನ!

ಸೋಮವಾರ, 13 ಜೂನ್ 2022 (07:30 IST)
ಮಹಾರಾಷ್ಟ್ರ : ಅನಾರೋಗ್ಯದಿಂದ ದಿಢೀರ್ ಅಣ್ಣ ನಿಧನರಾಗಿದ್ದಾರೆ. ಇದರಿಂದ ಅಣ್ಣನ ಪತ್ನಿ ಹಾಗೂ ಮಕ್ಕಳು ಆಘಾತದಿಂದ ಚೇತರಿಸಿಕೊಳ್ಳುಲು ಸಾಧ್ಯವಾಗಲಿಲ್ಲ,
 
ಇತ್ತ ಆಶ್ರವಿಲ್ಲದೆ ಕಂಗಾಲಾಗಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಪತ್ನಿಯನ್ನೇ ತಮ್ಮ ಮದುವೆಯಾಗಿದ್ದಾನೆ. ಈ ಮೂಲಕ ವಿಧವೆ ಅತ್ತಿಗೆ ಹಾಗೂ ಮಕ್ಕಳಿಗೆ ಹೊಸ ಜೀವನ ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಬುಲ್ದಾನಾ ಜಿಲ್ಲೆಯ ವಂಕಡ್ ಜಿಲ್ಲೆಯಲ್ಲಿ ನೆಲೆಸಿರುವ ದಮ್ದಾರ್ ಕುಟುಂಬ ತೀವ್ರ ಸಂಕಷ್ಟ ಎದುರಿಸಿತ್ತು. ದಿಢೀರ್ ಅನಾರೋಗ್ಯಕ್ಕೆ ತುತ್ತಾದ ಹರಿದಾಸ್ ದಮ್ದಾರ್ ಅಣ್ಣ ನಿಧನರಾಗಿದ್ದಾರೆ.

ಇದರಿಂದ ಅತ್ತಿಗೆಗೆ ದಿಕ್ಕೆ ತೋಚದಂತಾಗಿದೆ. ಇತ್ತ ಇಬ್ಬರು ಮಕ್ಕಳು ಕೂಡ ತಂದೆ ಇಲ್ಲದೆ ಕಂಗಾಲಾಗಿದ್ದಾರೆ. ಸೊಸೆಯ ನೋವು ನೋಡಲಾಗದ ಕಟುಂಬ ಹರಿದಾಸ್ ಬಳಿ ಅತ್ತಿಗೆಯನ್ನು ಮದುವೆಯಾಗಲು ಸೂಚಿಸಿದ್ದಾರೆ.

ಹರಿದಾಸ್ ದಮ್ದಾರ್ ನೇರವಾಗಿ ಅತ್ತಿಗೆ ಬಳಿ ವಿಚಾರ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಅತ್ತಿಗೆ ಕೂಡ ಒಪ್ಪಿಕೊಂಡಿದ್ದಾರೆ. ಬಳಿಕ ಇಬ್ಬರು ಮಕ್ಕಳ ತಾಯಿಯಾಗಿರುವ ಅತ್ತಿಗೆಯನ್ನು ತಮ್ಮ ಹರಿದಾಸ್ ದಮ್ದಾರ್ ಮದುವೆಯಾಗಿದ್ದಾರೆ. ಹರಿದಾಸ್ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾದರಿ ನಡೆ ಎಂದು ಪ್ರಶಂಸಿದ್ದಾರೆ.

ಸರಳವಾಗಿ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಮಾತನಾಡಿದ ಹರಿದಾಸ್, ಒಂದು ವರ್ಷದ ಹಿಂದೆ ಅಣ್ಣ ನಿಧನರಾಗಿದ್ದಾರೆ.

ಕಳೆದೊಂದು ವರ್ಷದಿಂದ ಅತ್ತಿಗೆ ನೋವು ನಮಗೆ ಅರ್ಥವಾಗಿತ್ತು. ಇತ್ತ ಪೋಷಕರು ಅತ್ತಿಗೆಯನ್ನು ಮದುವೆಯಾಗಲು ಸೂಚಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ