ಲೋಕಸಭೆಗೆ ನೂತನ ಸಚಿವರನ್ನು ಪರಿಚಯಿಸಿದ ಪ್ರಧಾನಿ ಮೋದಿ

ಸೋಮವಾರ, 18 ಜುಲೈ 2016 (21:02 IST)
ಮುಂಗಾರು ಅಧಿವೇಶನದ ಆರಂಭದ ದಿನವಾದ ಇಂದು ಪ್ರಧಾನಿ ಮೋದಿ, ಸಚಿವ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡಿರುವ ಸಚಿವರನ್ನು ಸಂಸತ್ತಿಗೆ ಪರಿಚಯಿಸಿದರು. 
 
ಕಳೆದ ಜುಲೈ 5 ರಂದು ನಡೆದ ಸಂಪುಟ ಪುನಾರಚನೆ ಸಂದರ್ಭದಲ್ಲಿ ಪ್ರಧಾನಿ ಮೋದಿ 19 ನೂತನ ಸಚಿವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿದ್ದರು.
 
ಎಚ್‌ಆರ್‌ಡಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ವಿಜಯ್ ಗೋಯಲ್, ಅನಿಲ್ ಮಾಧವ ದವೆ, ಫಗ್ಗನ್ ಸಿಂಗ್ ಕುಲಸ್ತೆ, ಎಸ್‌ಎಸ್.ಆಹ್ಲುವಾಲಿಯಾ, ರಮೇಶ್ ಚಂದ್ರಪ್ಪ, ರಾಜೇನ್ ಗೊಹೈನ್, ಪುರುಷೋತ್ತಮ ರೂಪಾಲಾ, ಎಂ.ರೆ.ಅಕ್ಬರ್, ಜಸ್ವಂತ್ ಸಿನ್ಹಾ ಸುಮನ್‌ಭಾಯಿ ಭಾಭೋರ್, ಅರ್ಜುನ್ ರಾಮ್ ಮೇಘವಾಲ್, ಮಹೇಂದ್ರನಾಥ್ ಪಾಂಡೆ, ಅಜಯ್ ತಮಟಾ, ಕೃಷ್ಣ ರಾಜ್, ಮನಸುಖ್ ಮಂಡಾವಿಯಾ, ಅನುಪ್ರೀಯಾ ಪಟೇಲ್, ಸಿಆರ್. ಚೌಧರಿ, ಪಿಪಿ ಚೌಧರಿ ಮತ್ತು ಸುಭಾಶ್ ರಾಮರಾವ್ ಅಮ್ರೆಯವರನ್ನು ಸಂಸತ್ತಿಗೆ ಪರಿಚಯಿಸಲಾಯಿತು.
 
ಇದಕ್ಕಿಂತ ಮೊದಲು ಮೇಘಾಲಯದ ತುರಾ ಲೋಕಸಭಾ ಕ್ಷೇತ್ರದಿಂದ ಎನ್‌ಪಿಪಿ ಪಕ್ಷದ ಟಿಕೆಟ್‌ನಿಂದ ಜಯಗಳಿಸಿದ ಕೊನ್ರಾಡ್ ಕೊಂಗಕಲ್ ಸಂಗ್ಮಾ ಅವರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು.
 
ಕಳೆದ ಮಾರ್ಚ್ 2016ರಲ್ಲಿ ಖ್ಯಾತ ರಾಜಕಾರಣಿ ಪಿ.ಎ.ಸಂಗ್ಮಾ ಅವರ ನಿಧನದಿಂದ ತೆರವಾಗಿದ್ದ ತುರಾ ಲೋಕಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ