ತಜ್ಞರ ಜತೆಗೆ ನರೇಂದ್ರ ಮೋದಿ ಮಹತ್ವದ ಸಂವಾದ

ಗುರುವಾರ, 21 ಅಕ್ಟೋಬರ್ 2021 (12:35 IST)
ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳು (CEO) ಮತ್ತು ಜಾಗತಿಕ ತೈಲ ಹಾಗೂ ಅನಿಲ ವಲಯದ ತಜ್ಞರ ಜತೆಗೆ ಬುಧವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂ.ಡಿ. ಮುಕೇಶ್ ಅಂಬಾನಿ, ರಷ್ಯಾದ ರಾಸ್ನೆಫ್ಟ್ ಸಿಇಒ ಮತ್ತು ಅಧ್ಯಕ್ಷ ಡಾ. ಇಗೋರ್ ಸೆಚಿನ್, ಸೌದಿ ಅರಾಮ್ಕೋದ ಸಿಇಒ ಹಾಗೂ ಅಧ್ಯಕ್ಷ ಅಮಿನ್ ನಸೀರ್ ಮತ್ತಿತರರು ಭಾಗಿಯಾದರು. ಸ್ವಚ್ಛ ಬೆಳವಣಿಗೆ ಮತ್ತು ಸುಸ್ಥಿರತೆಯ ಉತ್ತೇಜನವು ಈ ಸಂವಾದದ ವಿಸ್ತೃತವಾದ ಥೀಮ್ ಆಗಿತ್ತು. 2016ರಿಂದ ಆರಂಭವಾದ ಮೇಲೆ ಇದು ಇಂಥ ಉದ್ದೇಶ ಇರಿಸಿಕೊಂಡ ಆರನೇ ವಾರ್ಷಿಕ ಸಮಾವೇಶ ಆಗಿದೆ. ಜಾಗತಿಕ ಮಟ್ಟದ ತೈಲ ಹಾಗೂ ಅನಿಲ ವಲಯದ ನಾಯಕರು ಭಾಗಿ ಆಗಿದ್ದಾರೆ. ಈ ವಲಯದ ಪ್ರಮುಖ ವಿಷಯಗಳು ಮತ್ತು ಸಹಭಾಗಿತ್ವಕ್ಕೆ ಸಾಧ್ಯತೆ ಇರುವ ಕ್ಷೇತ್ರಗಳ ಅನ್ವೇಷಣೆ ಮಾಡುವುದು ಮತ್ತು ಭಾರತದಲ್ಲಿನ ಹೂಡಿಕೆ ಸಾಧ್ಯತೆಗಳನ್ನು ಚರ್ಚಿಸಲಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ