ಮುಂಬೈ ದಾಳಿಯಲ್ಲಿ ತಂದೆ-ತಾಯಿಯನ್ನ ಕಳೆದುಕೊಂಡ ಇಸ್ರೇಲ್ ಬಾಲಕನನನ್ನ ಭೇಟಿ ಮಾಡಲಿರುವ ಮೋದಿ

ಬುಧವಾರ, 5 ಜುಲೈ 2017 (12:32 IST)
ಮೂರು ದಿನಗಳ  ಇಸ್ರೇಲ್ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರಮೋದಿ, 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ ವೇಳೆ ತಂದೆ ತಾಯಿಯನ್ನ ಕಳೆದುಕೊಂಡು ಅನಾಥವಾಗಿರುವ ಮಗು ಮೋಶೆಯನ್ನ ಭೇಟಿ ಮಾಡಲಿದ್ದಾರೆ. ಜೊತೆಗೆ ಮಗುವನ್ನ ರಕ್ಷಿಸಿದ್ದ ಭಾರತದ ಮೂಲದ ಅಜ್ಜಿ ಸಂದ್ರಾ ಸ್ಯಾಮ್ಯುಯಲ್ಸ್ ಅವರನ್ನೂ ಭೇಟಿ ಮಾಡಲಿದ್ದಾರೆ.
 

ತಾಜ್ ಹೋಟೆಲ್ ಬಳಿಕ ನಾರಿಮನ್ ಹೌಸ್ ಮೇಲೂ ಉಗ್ರರು ದಾಳಿ ನಡೆಸಿದ್ದರು. ಈ ಸಂದರ್ಭ ಮೋಶೆ ಪೋಷಕರಾದ ರಿವ್ಕಾ ಮತ್ತು ಗರ್ವಿಲ್ ಹತರಾಗಿದ್ದರು. ಈ ಸಂದರ್ಭ ಮಗುವನ್ನ ಸಂದ್ರಾ ರಕ್ಷಿಸಿದ್ದ ಸಂದ್ರಾಗೆ ಇಸ್ರೇಲ್ ಗೌರವಾರ್ಥ ನಾಗರಿಕತ್ವ ನೀಡಿತ್ತು. ಅಂದು 2 ವರ್ಷದ ಮಗುವಾಗಿದ್ದ ಮೋಶೆ ಈಗ 10 ವರ್ಷದ ಬಾಲಕ. ಸದ್ಯ, ಬಾಲಕನೀಗ  ತನ್ನ ಅಜ್ಜಿ ತಾತನ ಪೋಷಣೆಯಲ್ಲಿದ್ದಾನೆ.

ಪ್ರಧಾನಿ ಮೋದಿ ನಮ್ಮನ್ನ ಭೇಟಿ ಮಾಡಲು ಬರುತ್ತಿದ್ದಾರೆಂದು ಕೇಳಿ ನನಗೆ ತುಂಬಾ ಅಚ್ಚರಿಯಾಯ್ತು. ಇದು ನಿಜಕ್ಕೂ ಅತ್ಯುನ್ನತ ಗೌರವ ಮತ್ತು ಅಚ್ಚರಿ ಎನಿಸುತ್ತಿದ್ದು, ಹೃದಯ ತುಂಬಿ ಬರುತ್ತಿದೆ. ಮುಂಬೈ ದಾಳಿಯ ಸಂತ್ರಸ್ತರ ಬಗ್ಗೆ ಭಾರತ ಸರ್ಕಾರ ಎಷ್ಟು ಗಮನ ಹರಿಸುತ್ತಿದೆ ಎಂದಬುದನ್ನ ಇದು ಸೂಚಿಸುತ್ತದೆ ಎಂದು ಸಂದ್ರಾ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ.. 1962ಕ್ಕಿಂತಲೂ ಅಧಿಕ ನಷ್ಟ ಅನುಭವಿಸುತ್ತೀರಿ ಜೋಕೆ: ಭಾರತವನ್ನ ಬೆದರಿಸಿದ ಚೀನಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ