ನಾಸಾ ವಿಜ್ಞಾನಿಗಳು ತಾವು ಪತ್ತೆ ಮಾಡಿದ ಬ್ಯಾಕ್ಟಿರಿಯಾ ವಿಧದ ಸೂಕ್ಷ್ಮಾಣು ಜೀವಿಗೆ ’ಸೊಲಿಬಾಸಿಲಸ್ ಕಲಾಂಜೀ' ಎಂದು ಹೊಸ ನಾಮಕರಣ ಮಾಡಿದ್ದಾರೆ. ಕಲಾಂ ಅವರು ನೀಡಿದ ಬಹುಮುಖ್ಯ ಕೊಡುಗೆಯಿಂದಾಗಿ ಸೂಕ್ಷ್ಮಾಣು ಜೀವಿಗೆ ಅವರ ಹೆಸರಿಟ್ಟು ನಮನ ಸಲ್ಲಿಸಿದ್ದೇವೆ ಎಂದು ಜೆಪಿಎಲ್‌ನ ಹಿರಿಯ ಸಂಶೋಧಕ ಡಾ. ಕಸ್ತೂರಿ ವೆಂಕಟೇಶ್ವರನ್ ಹೇಳಿದ್ದಾರೆ.