ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

Sampriya

ಗುರುವಾರ, 21 ಆಗಸ್ಟ್ 2025 (17:47 IST)
Photo Credit X
ಮಧುರೈ: ತಮಿಳು ನಟ ಮತ್ತು ರಾಜಕಾರಣಿ ವಿಜಯ್ ಅವರ 33 ವರ್ಷದ ಬೆಂಬಲಿಗ ಇಂದು ಮಧುರೈನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮೆಗಾ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಸಾವನ್ನಪ್ಪಿದ್ದಾರೆ.

ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯ ಡೀನ್ ಪ್ರಕಾರ, ಪ್ರಭಾಕರನ್ ನಿನ್ನೆ ರಾತ್ರಿ ಚೆನ್ನೈನಿಂದ ತನ್ನ ಸ್ನೇಹಿತರೊಂದಿಗೆ ಕಾರ್ಯಕ್ರಮಕ್ಕೆ ತೆರಳಲು ವ್ಯಾನ್‌ನಲ್ಲಿ ತೆರಳಿದ್ದರು. ಭಾನುವಾರ ಬೆಳಿಗ್ಗೆ, ವಾಹನವು ಮಧುರೈನ ಚಕ್ಕಿಮಂಗಲಂ ಬಳಿ ನಿಂತಿತು. ಈ ವೇಳೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. 

ಕೂಡಲೇ ಅವರನ್ನು ಮಧುರೈ ಸರ್ಕಾರಿ ರಾಜಾಜಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

2026 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಪ್ರಮುಖ ಶಕ್ತಿ ಪ್ರದರ್ಶನವಾದ ಮಧುರೈನಲ್ಲಿ ಟಿವಿಕೆ ಅಧ್ಯಕ್ಷ ವಿಜಯ್ ತನ್ನ ಎರಡನೇ ರಾಜ್ಯ ಮಟ್ಟದ ಸಮ್ಮೇಳನವನ್ನು ಪ್ರಾರಂಭಿಸಿದಾಗ ಸಾವು ಸಂಭವಿಸಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ