ವಿಜಯ್ ದಿವಸ್: 1971ರ ಭಾರತ-ಪಾಕ್ ಕದನದ ಹುತಾತ್ಮರಿಗೆ ದೇಶದ ನಮನ

ಶುಕ್ರವಾರ, 16 ಡಿಸೆಂಬರ್ 2016 (12:58 IST)
ಇದು ದೇಶ 45ನೇ 'ವಿಜಯ ದಿವಸ್' ಅನ್ನಾಚರಿಸುತ್ತಿದ್ದು 1971ರ ಭಾರತ- ಪಾಕ್ ಯುದ್ಧದಲ್ಲಿ ವೀರಮರಣವನ್ನಪ್ಪಿದ ಸೈನಿಕರಿಗೆ ಸಂಪೂರ್ಣ ದೇಶ ಗೌರವ ಸಲ್ಲಿಸಿದೆ. 
ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮೂರು ಸೇನೆಯ ಮುಖ್ಯಸ್ಥರ ಜತೆ ಅಮರ್ ಜವಾನ್ ಜ್ಯೋತಿ ಬಳಿ ಇಂದು ಮುಂಜಾನೆ ಹುತಾತ್ಮ ಯೋಧರಿಗೆ ಗೌರವವನ್ನು ಸಲ್ಲಿಸಿದರು.
 
ಇಂದು ನಾವು ಹೆಮ್ಮೆಯಿಂದ ತಲೆ ಎತ್ತಿ ಹೇಳಿಕೊಳ್ಳುವ ದಿನ. 1971ರಲ್ಲಿ ಭಾರತದ ವಿರುದ್ಧ ಯುದ್ಧ ಸಾರಿದ್ದ ಪುಂಡ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಂತ ಮಹತ್ವದ ದಿನ. ಈ ದಿನವನ್ನು ‘ವಿಜಯ್ ದಿವಸ್’ ಎಂದು ಆಚರಿಸಲಾಗುತ್ತಿದೆ. ಇದೇ ದಿನದಂದು ಪಾಕ್ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ತನ್ನ 93,000 ಸೈನಿಕರ ಜತೆ ಜನರಲ್ ಜಗಜಿತ್ ಸಿಂಗ್ ಔರೋರ ಮತ್ತು ಬಾಂಗ್ಲಾ ದೇಶದ ಸೇನಾ ಮುಖ್ಯಸ್ಥ ಮುಕ್ತಿ ಬಹಿನಿ ಅವರ ಮುಂದೆ ಶರಣಾಗಿದ್ದರು. 
 
ಈ ಯುದ್ಧದ ಅಂತ್ಯ ಪಶ್ಚಿಮ ಪಾಕಿಸ್ತಾನ ಬಾಂಗ್ಲಾದೇಶವಾಗಿ ಉದಯವಾಗಲು ಕಾರಣವಾಗಿತ್ತು. 
 
ಬಾಂಗ್ಲಾ ದೇಶದ ಗೃಹ ಸಚಿವ ಅಸಾದುಜ್ಜಾಮಾನ್ ಖಾನ್ ಮತ್ತು ಯುದ್ಧದಲ್ಲಿ ಪಾಲ್ಗೊಂಡಿದ್ದ 72 ಹಿರಿಯ ಸೈನಿಕರು, ಮುಕ್ತಿ ಜೋಧರು ಸದಸ್ಯರನ್ನೊಳಗೊಂಡ ಬಾಂಗ್ಲಾ ನಿಯೋಗ 'ವಿಜಯ್ ದಿವಸ್‌' ಆಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ