ರಾಹುಲ್ ಜತೆ ಸಿಧು ಸಮಾಲೋಚನೆ

ಶುಕ್ರವಾರ, 13 ಜನವರಿ 2017 (07:46 IST)
ಖ್ಯಾತ ಕ್ರಿಕೆಟಿಗ ಪರಿವರ್ತಿತ ರಾಜಕಾರಣಿ ನವಜೋತ್ ಸಿಧು ಗುರುವಾರ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.

ಒಂದೆರಡು ದಿನಗಳಲ್ಲಿ ಅವರು ಕಾಂಗ್ರೆಸ್ ತೆಕ್ಕೆಗೆ ಸೇರುವುದು ಖಚಿತವಾಗಿದ್ದು ಪಂಜಾಬ್ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ.
 
ಸಿಧು ಇಟ್ಟಿರುವ ಬೇಡಿಕೆಯಂತೆ ಅವರ ನಾಲ್ಕೈದು ಮಂದಿ ಬೆಂಬಲಿಗರಿಗೆ ಸಹ ಟಿಕೆಟ್ ಸಿಗುವುಗು ಖಚಿತವಾಗಿದೆ. ಅಲ್ಲದೆ ಸಿಧು ಅಮೃತಸರ ಲೋಕಸಭಾ ಕ್ಷೇತ್ರದಿಂದ ಕೈ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶಕ್ಕೂ ಕೈ ವರಿಷ್ಠರು ಸೈ ಎಂದಿದ್ದಾರೆ.
 
2004ರಿಂದ 2014ರವರೆಗೂ ಅಮೃತಸರದ ಸಂಸದರಾಗಿದ್ದ ಸಿಧು ಅವರಿಗೆ 2014ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರ್ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಿರಲಿಲ್ಲ. ಹಾಲಿ ಹಣಕಾಸು ಸಚಿವರು ಅಲ್ಲಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. 
 
ಪಕ್ಷದ ವರಿಷ್ಠರ ಜತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಸಿಧು ಮತ್ತು ಅವರ ಪತ್ನಿ ಕಳೆದ ವರ್ಷ ಬಿಜೆಪಿಯನ್ನು ತ್ಯಜಿಸಿದ್ದರು.
 
ಸಿಧು ಅವರ ಪತ್ನಿ ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮತ್ತೀಗ ಸಿಧು ಸಹ ಅಧಿಕೃತವಾಗಿ ಪಕ್ಷವನ್ನು ಸೇರಲಿದ್ದಾರೆ. 
 
ಪಂಜಾಬ್‌ನಲ್ಲಿ ಫೆಬ್ರವರಿ 4 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ