ಜಿಲ್ಲೆಯ ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯ ಮನೆಯೊಂದರ ಮುಂದೆ ಪುಟ್ಟ ಬೇವಿನ ಗಿಡವೊಂದು ಗಿರಗಿರನೆ ತಿರುಗುತ್ತಿದೆ. ಅದನ್ನು ನೋಡಿದ ಜನರಲ್ಲಿ ಭಯ, ಆತಂಕ, ಭಕ್ತಿ ಒಮ್ಮೆಲೆ ಮೂಡುತ್ತಿದೆ. ಅದನ್ನು ಮುಟ್ಟುವ ಧೈರ್ಯ ಯಾರಿಗೂ ಇಲ್ಲ. ಆದರೂ ಆ ಗಿಡಕ್ಕೆ ದೈವಶಕ್ತಿ ಇದೆ ಎಂದು ಭಾವಿಸಿರುವ ಜನರು ಸುತ್ತಲೂ ಇಟ್ಟಿಗೆಗಳನ್ನು ಜೋಡಿಸಿ ಅರಿಸಿಣ-ಕುಂಕುಮ, ಹೂವು ಹಾಕಿ ಪೂಜೆ ಸಲ್ಲಿಸುತ್ತಿದ್ದಾರೆ.
ಈ ಕೌತುಕವನ್ನು ನೋಡಲು ಸಾಗರೋಪಾದಿಯಲ್ಲಿ ಜನರು ಹರಿದು ಬರುತ್ತಿದ್ದಾರೆ.
ತನ್ನಿಂತಾನೆ ತಿರುಗುತ್ತಿರುವ ಈ ಬೇವಿನಗಿಡದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಸ್ಥಳ ಪರಿಶೀಲಿಸಲು ಭೂಗರ್ಭ ಶಾಸ್ತ್ರಜ್ಞರು ಸ್ಥಳಕ್ಕೆ ಧಾವಿಸಿದ್ದಾರೆ.