ದೆಹಲಿ ಹೈಕೋರ್ಟ್ ನ ನ್ಯಾ. ಮುರಳೀಧರ್ ರನ್ನು ವರ್ಗಾವಣೆ ಮಾಡಿದ ಕೇಂದ್ರ ಸರ್ಕಾರ

ಗುರುವಾರ, 27 ಫೆಬ್ರವರಿ 2020 (11:42 IST)
ನವದೆಹಲಿ : ದೆಹಲಿ ಹೈಕೋರ್ಟ್ ನ ನ್ಯಾಯಾಧೀಶ ಮುರಳೀಧರ್ ಅವರನ್ನು ಪಂಜಾಬ್, ಹರಿಯಾಣ ಹೈಕೋರ್ಟ್ ಜಡ್ಜ್ ಆಗಿ ವರ್ಗಾವಣೆ ಮಾಡಲಾಗಿದೆ.


ನಿನ್ನೆ ದೆಹಲಿ ಗಲಭೆ ಬಗ್ಗೆ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಮುರಳೀಧರ‍ ಅವರು ದೆಹಲಿಯ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಬಿಜೆಪಿ ನಾಯಕರ ಮೇಲೆ ಎಫ್ಐಆರ್ ದಾಖಲಿಸುವಂತೆ ಆದೇಶಿಸಿದ್ದರು.
ಆದರೆ ನಿನ್ನೇ ರಾತ್ರಿ  ನ್ಯಾ. ಮುರಳೀಧರ್ ಅವರನ್ನು ಪಂಜಾಬ್, ಹರಿಯಾಣ ಹೈಕೋರ್ಟ್ ಜಡ್ಜ್ ಆಗಿ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಧೈರ್ಯಶಾಲಿ  ನ್ಯಾ.ಲೋಯಾರನ್ನ ವರ್ಗಾವಣೆ ಮಾಡಿರಲಿಲ್ಲವೆಂದು ಪರೋಕ್ಷವಾಗಿ  ವ್ಯಂಗ್ಯವಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ