ಅನೈತಿಕ ಸಂಬಂಧ ತಡೆಯಲು ಬಂದಿದೆ ಹೊಸ ಟೆಕ್ನಾಲಾಜಿ

ಸೋಮವಾರ, 27 ನವೆಂಬರ್ 2023 (11:32 IST)
ಪತ್ನಿಯರು ಎಷ್ಟೇ ತಡೆದರು ಪತಿಯಂದಿರ ಅಕ್ರಮ ಸಂಬಂಧ ತಡೆಯಲು ಸಾಧ್ಯವಾಗುತ್ತಿಲ್ಲ. ಅಥವಾ ಪತಿಯಂದಿರು ಎಷ್ಟೇ ಪ್ರಯತ್ನ ಪಟ್ಟರು ಪತ್ನಿಯ ಅಫೇರ್‌ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.  ಅಕ್ರಮ ಸಂಬಂಧಗಳು ನಿರಂತರವಾಗಿ ನಡೆಯುತ್ತಲೇ ಬಂದಿವೆ. ಇದೀಗ ತಂತ್ರಜ್ಞಾನದ ಸಹಾಯದಿಂದ ಅನೈತಿಕ ಸಂಬಂಧ ತಡೆಯುವಂತಹ ವ್ಯವಸ್ಥೆ ತೆರೆಗೆ ಬಂದಿದೆ
 
ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಹೊಂದುವುದನ್ನು ತಡೆಯಲು ಮೈಕ್ರೋಸಾಪ್ಟ್ ಮತ್ತು ಆಪಲ್ ಹೊಸ ರೀತಿಯ ಪ್ರಯತ್ನವೊಂದನ್ನು ಮಾಡಿವೆ.
 
ಹೌದು. ಸಂಗಾತಿ ಅನೈತಿಕ ಸಂಬಂಧದ ಬಗ್ಗೆ ತಿಳಿಯಲು ‘ಜೆನಿಟಲ್ ಇಂಪ್ಲಾಂಟ್ ‘ ಎಂಬ ಚಿಪ್ ವೊಂದನ್ನು ಕಂಡುಹಿಡಿದಿದ್ದಾರೆ. ಇದರ ಒಂದು  ಚಿಪ್ ನ್ನು ಮಹಿಳೆ ಮತ್ತು ಪುರುಷರ ಖಾಸಗಿ ಭಾಗಕ್ಕೆ ಕಸಿ ಮಾಡಲಾಗುತ್ತದೆ. ಮತ್ತೊಂದು ಚಿಪ್ ನಿಮ್ಮ ಮೊಬೈಲ್ ನಲ್ಲಿರಲಿದೆ.
 
ಇದರಿಂದ ನಿಮ್ಮಸಂಗಾತಿ ಯಾವುದೇ ಸ್ಥಳದಲ್ಲಿದ್ದರೂ, ಬೇರೆಯವರ ಜೊತೆ ಸಂಬಂಧ ಬೆಳೆಸಿದರೆ ತಕ್ಷಣ ನಿಮ್ಮ ಮೊಬೈಲ್ ಗೆ ಎಚ್ಚರಿಕೆ ಸಂದೇಶ ಬರುತ್ತದೆ. ಇದರಿಂದ ಸಂಗಾತಿಯ ಕಳ್ಳ ಸಂಬಂಧ ತಿಳಿಯಬಹುದು. ಈ ಚಿಪ್ ಮುಂದಿನ ವರ್ಷ  ಮಾರುಕಟ್ಟೆಗೆ ಬರಲಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ