ನವವಿವಾಹಿತ ಆಟೋ ಚಾಲಕನಿಂದ ಯುವತಿ ಮೇಲೆ ಅತ್ಯಾಚಾರ

ಬುಧವಾರ, 12 ಜನವರಿ 2022 (09:38 IST)
ಚಂಡೀಘಡ: ನವವಿವಾಹಿತ ಆಟೋ ಚಾಲಕನೊಬ್ಬ ತನ್ನ ಆಟೋದಲ್ಲಿ ಪ್ರಯಾಣಿಕಳಾಗಿ ಬಂದಿದ್ದ 35 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಚಂಡೀಘಡದಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದಷ್ಟೇ ಆರೋಪಿ ಚಾಲಕ ವಿವಾಹವಾಗಿದ್ದ. ಆದರೆ ಈಗ ತನ್ನ ಆಟೋದಲ್ಲಿ ಲಿಫ್ಟ್ ಪಡೆದಿದ್ದ ಮಹಿಳೆಯನ್ನು ಆಟೋದಲ್ಲಿಯೇ ಅತ್ಯಾಚಾರವೆಸಗಿದ್ದಾನೆ.

ರೈಲ್ವೇ ಸ್ಟೇಷನ್ ಗೆ ಹೋಗಲು ಆಟೋ ಹತ್ತಿದ್ದ ಮಹಿಳೆಯನ್ನು ಬೇರೊಂದು ಸ್ಥಳಕ್ಕೆ ಕರೆದೊಯ್ದ ಕಾಮುಕ ಈ ಕೃತ್ಯವೆಸಗಿದ್ದಾನೆ. ಅಲ್ಲದೆ ರಸ್ತೆಯಲ್ಲೇ ಆಕೆ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ