ಗೋವಾ ಬೀಚ್ ನಲ್ಲಿ ಇನ್ನು ಪಾರ್ಟಿ ಮಾಡುವಂತಿಲ್ಲ!

ಬುಧವಾರ, 12 ಏಪ್ರಿಲ್ 2017 (09:15 IST)
ಪಣಜಿ: ಗೋವಾ ಬೀಚ್ ಎಂದರೆ ಸಾಕು, ಪಾರ್ಟಿ, ಮಸ್ತ್ ಮಜಾ ನೆನಪಾಗುವುದು. ಆದರೆ ಇದೆಲ್ಲದಕ್ಕೂ ಇನ್ನು ಕತ್ತರಿ ಬೀಳಲಿದೆ. ಮುಂದಿನ ಎರಡು ವಾರಗಳಲ್ಲಿ ಸಮುದ್ರ ಕಿನಾರೆಯಲ್ಲಿ ನಡೆಯುವ ಮತ್ತು ನೈಟ್ ಪಾರ್ಟಿಗಳಿಗೆ ನಿಷೇಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

 

ಸಮುದ್ರ ತೀರದಲ್ಲಿ ಪಾರ್ಟಿ ನೆಪದಲ್ಲಿ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ, ನೈಟ್ ಪಾರ್ಟಿಗಳ್ನು ನಿಷೇಧಿಸಲೇಬೇಕು ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲಿಕರ್ ತಿಳಿಸಿದ್ದಾರೆ.

 
ಇಂತಹ ಪಾರ್ಟಿಗಳು ನಮ್ಮ ಸಂಸ್ಕೃತಿಯಲ್ಲ. ಈಗಾಗಲೇ ಶೇಕಡಾ 80 ರಷ್ಟು ನೈಟ್ ಪಾರ್ಟಿಗೆ ಕಡಿವಾಣ ಹಾಕಲಾಗಿದೆ. ಗೋವಾದ ಬೀಚ್ ಗಳಲ್ಲಿ ಸಾಮಾನ್ಯವಾಗಿ ಬೆಳಗಿನ ಜಾವದವರೆಗೂ ಪಾರ್ಟಿ ನಡೆಯುತ್ತದೆ. ಇದಕ್ಕೆ ಇನ್ನು ಕಡಿವಾಣ ಬೀಳಲಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ