ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಗಲ್ಲು ಯಾವಾಗ? ಇಂದು ಸಿಗಲಿದೆ ಉತ್ತರ
ಈ ಬಗ್ಗೆ ನಿನ್ನೆ ರಾಜ್ಯಸಭೆಯಲ್ಲೂ ಚರ್ಚೆಯಾಗಿತ್ತು. ಆಮ್ ಆದ್ಮಿ ಪಕ್ಷದ ಸಂಸದ ಮತ್ತು ರಾಜ್ಯ ಸಭಾಪತಿ ಎಂ ವೆಂಕಯ್ಯ ನಾಯ್ಡು ತಕ್ಷಣವೇ ಇವರಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು ಎಂದು ಒತ್ತಾಯಿಸಿದ್ದರು. ಈ ಪೈಕಿ ಈಗಾಗಲೇ ಎಲ್ಲಾ ಕಾನೂನಾತ್ಮಕ ಅವಕಾಶಗಳನ್ನು ಕಳೆದುಕೊಂಡ ಅಪರಾಧಿಗಳನ್ನು ಮೊದಲು ಗಲ್ಲಿಗೇರಿಸಿ ಉಳಿದ ಆರೋಪಿಗಳಿಗೆ ನಂತರ ಗಲ್ಲು ಶಿಕ್ಷೆ ವಿಧಿಸಬೇಕೇ ಅಥವಾ ನಾಲ್ವರನ್ನೂ ಜತೆಯಾಗಿ ಗಲ್ಲಿಗೇರಿಸಬೇಕೇ ಎಂಬ ಬಗ್ಗೆ ಕೋರ್ಟ್ ತೀರ್ಪು ನೀಡಲಿದೆ.