ಮೊಬೈಲ್ ಫೋನ್ ಕಳೆದು ಹೋದ್ರೆ ಇನ್ನು ಚಿಂತಿಸಬೇಕಿಲ್ಲ!
ಪ್ಯಾನ್ ಕ್ಸ್ ಅಭಿವೃದ್ಧಿ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜ್ಕುಮಾರ್ ಉಪಾಧ್ಯಾಯ ಅವರು ತಂತ್ರಜ್ಞಾನವು ಪ್ಯಾನ್ ಇಂಡಿಯಾ ನಿಯೋಜನೆಗೆ ಸಿದ್ಧವಾಗಿದೆ ಎಂದು ದೃಢಪಡಿಸಿದ್ದಾರೆ.
ಖಚಿತ ದಿನಾಂಕವನ್ನು ಅಧಿಕಾರಿಗಳು ತಿಳಿಸಿಲ್ಲವಾದರೂ ಸಿಇಐಆರ್ ಸಿಸ್ಟಮ್ ಮೇ 17ರಂದು ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ. ಭಾರತದಲ್ಲಿ ಮೊಬೈಲ್ಗಳನ್ನು ಮಾರಾಟ ಮಾಡುವುದಕ್ಕೂ ಮೊದಲು ಸಾಧನಗಳ ಅಂತಾರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತನ್ನು ಬಹಿರಂಗಪಡಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಐಎಂಇಐ 15 ಅಂಕಿಯ ಗುರುತಾಗಿದ್ದು, ಪ್ರತಿ ಮೊಬೈಲ್ ಫೋನ್ನಲ್ಲೂ ಭಿನ್ನ ಸಂಖ್ಯೆಯದ್ದಾಗಿರುತ್ತದೆ. ಟೆಲಿಕಾಂ ಆಪರೇಟರ್ಗಳು ಹಾಗೂ ಸಿಇಐಆರ್ ಸಿಸ್ಟಮ್ ಅನ್ನು ಸಾಧನದ ಐಎಂಇಐ ಸಂಖ್ಯೆಗೆ ಲಿಂಕ್ ಮಾಡಿದ ಬಳಿಕ ಕಳೆದು ಹೋದ ಮೊಬೈಲ್ ಅನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.