ಹೋಟೆಲ್ ಗಳಲ್ಲಿ ಇನ್ನು ಟಿಪ್ಸ್ ಕೊಡುವ ಮೊದಲು ಈ ಸುದ್ದಿ ಓದಿ!

ಶನಿವಾರ, 15 ಏಪ್ರಿಲ್ 2017 (08:22 IST)
ನವದೆಹಲಿ:  ಹೋಟೆಲ್ ಅಥವಾ ರೆಸ್ಟೋರೆಂಟ್ ಗೆ ಹೋಗಿ ಗಡದ್ದಾಗಿ ತಿಂದು ತೇಗಿದ ಮೇಲೆ ವೇಟರ್ ಬಂದು ಬಿಲ್ ಟೇಬಲ್ ಮೇಲೆ ಇಡುವುದು ಸಹಜ. ಆದರೆ ತಿಂದ ತಿಂಡಿಯ ಜತೆಗೆ ಸರ್ವಿಸ್ ಚಾರ್ಜ್ ಎಂದು ರೆಸ್ಟೋರೆಂಟ್ ನವರು ಹೆಚ್ಚುವರಿ ಬಿಲ್ ಹಾಕಿದರೆ ಕೊಡಬೇಕಿಲ್ಲ.

 

ಹಾಗೊಂದು ವ್ಯವಸ್ಥೆ ನಮ್ಮಲ್ಲಿಲ್ಲ. ತಿಂಡಿ ಸರಬರಾಜು ಮಾಡಿದ್ದಕ್ಕೆ ಹೋಟೆಲ್ ನವರು ಹೆಚ್ಚುವರಿ ಬಿಲ್ ಹಾಕುವಂತಿಲ್ಲ. ಹಾಗೆ ಮಾಡಿದರೆ ಅದು ಗ್ರಾಹಕ ವಿರೋಧಿಯಾಗುತ್ತದೆ. ಒಂದು ವೇಳೆ ಅಂತಹ ಬಿಲ್ ಹಾಕುವುದಿದ್ದರೆ ಮೊದಲೇ ಸೂಚಿಸಬೇಕು. ಹಾಗಿದ್ದರೂ ಅದನ್ನು ಪಾವತಿಸುವುದು ಬಿಡುವುದು ಗ್ರಾಹಕರ ಇಚ್ಛೆ ಎಂದು ಕೇಂದ್ರ ಆಹಾರ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

 
ವೇಟರ್ ಗೆ ಟಿಪ್ಸ್ ಕೊಡುವುದು ಬಿಡುವುದು ಗ್ರಾಹಕರ ಇಚ್ಛೆ. ಇದಕ್ಕೆಲ್ಲಾ ಬಲವಂತ ಮಾಡುವಂತಿಲ್ಲ. ಅಂತಹ ಮಸೂದೆಯನ್ನು ಶೀಘ್ರದಲ್ಲೇ ಮಂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ