ಬಾಬಾ ರಾಮ್ ದೇವ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ

ಗುರುವಾರ, 15 ಜೂನ್ 2017 (12:02 IST)
ರೊಹ್ಟಕ್: ಯೋಗ ಗುರು ಬಾಬಾ ರಾಮ್'ದೇವ್ ಅವರ ವಿವಾದಾತ್ಮಕ ಹೇಳಿಕೆ ಹಿನ್ನಲೆಯಲ್ಲಿ ರಾಮ್ ದೇವ್ ವಿರುದ್ದ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. 
 
ಕೆಲ ದಿನಗಳ ಹಿಂದಷ್ಟೇ ಬಾಬ್ ರಾಮ್ ದೇವ್ ಅವರು 'ಭಾರತ್ ಮಾತಾ ಕಿ ಜೈ' ಎನ್ನದವರ ರುಂಡ ಕಡಿಯುತ್ತೇನೆಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹರಿಯಾಣ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸುಭಾಷ್ ಬಾತ್ರಾ ಅವರು ರಾಮ್'ದೇವ್ ವಿರುದ್ದ ಪ್ರಕರಣ ದಾಖಲಿಸಿದ್ದರು. 
 
ಪ್ರಕರಣ ಸಂಬಂಧ ಈ ಹಿಂದೆ ವಿಚಾರಣೆ ನಡೆಸಿದ್ದ ರೊಹ್ಟಕ್ ನ್ಯಾಯಾಲಯ ಮುಂದಿನ ವಿಚಾರಣೆಗೆ ಸ್ವತಃ ಹಾಜರಾಗುವಂತೆ ಸೂಚಿಸಿ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿತ್ತು. ನ್ಯಾಯಾಲಯ ಆದೇಶ ನೀಡಿದ್ದರೂ ರಾಮ್'ದೇವ್ ಅವರು ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಕೆಂಡಾಮಂಡಲಗೊಂಡಿರುವ ನ್ಯಾಯಾಲಯ ಇದೀಗ ಜಾಮೀನು ರಹಿತ ವಾರೆಂಟ್ ನ್ನು ಜಾರಿ ಮಾಡಿದೆ.
 

ವೆಬ್ದುನಿಯಾವನ್ನು ಓದಿ