ದೇಶದ ಯಾವುದೇ ವಿಮಾನ ನಿಲ್ದಾಣಕ್ಕೂ ಇನ್ನು ಹೆಸರಿರೋದಿಲ್ಲ!

ಶುಕ್ರವಾರ, 10 ಫೆಬ್ರವರಿ 2017 (09:27 IST)
ನವದೆಹಲಿ: ನಮ್ಮ ದೇಶದ ಎಲ್ಲಾ ಅಂತಾರಾಷ್ಟ್ರೀ ವಿಮಾನ ನಿಲ್ದಾಣಗಳಿಗೆ ಒಂದೊಂದು ಗಣ್ಯ ವ್ಯಕ್ತಿಗಳ ಹೆಸರಿದೆ. ಮಾಜಿ ಪ್ರಧಾನಿಗಳಾದ ರಾಜೀವ್ ಗಾಂಧಿ, ಇಂದಿರಾ ಗಾಂಧಿ ಅಲ್ಲದೆ, ಇನ್ನಿತರ ಸಾಧಕರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಆದರೆ ಇನ್ನು ಹಾಗಲ್ಲ!

 
ಇನ್ನು ಮುಂದೆ ವಿಮಾನ ನಿಲ್ದಾಣಗಳಿಗೆ ಯಾವುದೇ ರಾಜಕಾರಣಿ ಅಥವಾ ಇನ್ನಿತರ ಸಾಧಕರ ಹೆಸರಿಟ್ಟು ಕರೆಯುವಂತಿಲ್ಲ. ಎಲ್ಲಾ ವಿಮಾನ ನಿಲ್ದಾಣಗಳನ್ನು ಆಯಾ ಊರಿನ ಹೆಸರು ಹಿಡಿದೇ ಹೇಳಬೇಕು. ಹೀಗೊಂದು ಹೊಸ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ.

ಈ ಅಧಿವೇಶನ ಅಥವಾ ಮುಂದಿನ  ಅಧಿವೇಶನದಲ್ಲಿ ಇದನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಆದರೆ ಇದರ ಸುದ್ದಿ ತಿಳಿದ ತಕ್ಷಣವೇ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘ ವಿರೋಧಿಸಲು ತೀರ್ಮಾನಿಸಿದೆ. ಎಷ್ಟೋ ಹೋರಾಟ ಮಾಡಿದ ಮೇಲೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲಾಗಿದೆ. ಅದನ್ನು ಇಲ್ಲವಾಗಿಸಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಅಶ್ವಥ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ