ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಎನ್ಎಸ್ ಪಿ ಮಾತೃ ವಾತ್ಸಲ್ಯ ಯೋಜನೆ ಜಾರಿಗೆ: ಇಲ್ಲಿದೆ ವಿವರ

Krishnaveni K

ಬುಧವಾರ, 18 ಸೆಪ್ಟಂಬರ್ 2024 (11:59 IST)
ಬೆಂಗಳೂರು: ಕೇಂದ್ರ ಸರ್ಕಾರ ಈ ಬಾರಿ ಬಜೆಟ್ ನಲ್ಲಿ ಘೋಷಿಸಿದ ಜನಪ್ರಿಯ ಯೋಜನೆಯಲ್ಲಿ ಎನ್ಎಸ್ ಪಿ ಮಾತೃವಾತ್ಸಲ್ಯ ಯೋಜನೆಯೂ ಒಂದು. ಈ ಯೋಜನೆಯನ್ವಯ ನಿಮ್ಮ ಮಕ್ಕಳ ಭವಿಷ್ಯ ಸದೃಢಗೊಳಿಸಬಹುದಾಗಿದೆ. ಈ ಯೋಜನೆಯ ವಿವರ ಇಲ್ಲಿದೆ.

ಯಾವುದೇ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಅವರ ತಂದೆ ತಾಯಿ ಅಥವಾ ಪಾಲಕರು ಎನ್ ಎಸ್ ಪಿ ವಾತ್ಸಲ್ಯ ಖಾತೆ ಆರಂಭಿಸಬಹುದು. ಮಕ್ಕಳು ಪ್ರಾಪ್ತ ವಯಸ್ಸಿಗೆ ಅಂದರೆ 18 ವರ್ಷ ವಯಸ್ಸಿಗೆ ಬಂದ ಮೇಲೆ ಆ ಖಾಥೆ ಎನ್ ಎಸ್ ಪಿ ಖಾತೆಯಾಗಿ ಪರಿವರ್ತನೆಯಾಗುತ್ತದೆ.

ಮಗು ದೊಡ್ಡವರಾದ ಮೇಲೆ ತಾನೇ ಆ ಖಾತೆಯನ್ನು ನಿಭಾಯಿಸಿಕೊಂಡು ಹೋಗಬಹುದು. ಇದು ಆ ಮಗುವಿನ ಭವಿಷ್ಯಕ್ಕೆ ಒಂದಷ್ಟು ಹಣ ಕೂಡಿಟ್ಟಂತಾಗುತ್ತದೆ. ಮಕ್ಕಳಲ್ಲೂ ಹಣಕಾಸಿನ ಕೂಡುವಿಕೆ ಬಗ್ಗೆ ಜಾಗೃತಿ ಮೂಡಲಿ ಎಂಬ ಕಾರಣಕ್ಕೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇಂದಿನಿಂದ ಈ ಯೋಜನೆ ಜಾರಿಗೆ ಬರಲಿದೆ.

ನ್ಯಾಷನಲ್ ಪೆನ್ಷನ್ ಸಿಸ್ಟಂ ಎನ್ನುವುದು ಮೊದಲು ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಉದ್ಯೋಗಿಗಳು ತಮ್ಮ ಮಕ್ಕಳ ಹೆಸರಿನಲ್ಲೂ ಖಾತೆ ತೆರೆದು ತಮ್ಮ ಮಕ್ಕಳ ಖಾತೆಗೆ ಸೇರಿಸಬಹುದು. ಈ ಮೊದಲು ಇದು 18-70 ವರ್ಷದೊಳಗಿನವರಿಗೆ ಮಾತ್ರ ಸೀಮಿತವಾಗಿತ್ತು. ಈಗ ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದಾಗಿದೆ.

ಈ ಮೊದಲು ಉದ್ಯೋಗಿಗಳು ತಮ್ಮ ವೇತನ ಶೇ.10 ರಷ್ಟನ್ನು ಎನ್ಎಸ್ ಪಿ ಖಾತೆಗೆ ಹಾಕಬಹುದಾಗಿತ್ತು. ಈಗ ಇದನ್ನು ಶೇ.14 ಕ್ಕೆ ಏರಿಕೆ ಮಾಡಲಾಗಿದೆ. ಆದರೆ ಕಂಪನಿಯು ಉದ್ಯೋಗಿಯ ಎನ್ಎಸ್ ಪಿ ಖಾತೆಗೆ ಹಣ ಹಾಕುವುದು ಕಡ್ಡಾಯವಲ್ಲ. ಇದು ಆಯಾ ಕಂಪನಿಯ ಐಚ್ಛಿಕ ಆಯ್ಕೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ