ಸುಪ್ರೀಂ ಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ
ಸಂಪ್ರದಾಯದ ಪ್ರಕಾರ ನಿರ್ಗಮಿಸುವ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಸೂಚಿಸಬೇಕು. ಅದರಂತೆ ಎನ್ ವಿ ರಮಣ ಹೆಸರನ್ನು ಶಿಫಾರಸ್ಸು ಮಾಡಲಾಗಿದೆ. ಏಪ್ರಿಲ್ 23 ರಂದು ಬೋಬ್ಡೆಯವರು ನಿವೃತ್ತರಾಗಲಿದ್ದಾರೆ. ಮುಖ್ಯ ನ್ಯಾಯಮೂರ್ತಿಯಾಗಿ ಎನ್ ವಿ ರಮಣ ಅಧಿಕಾರ ಸ್ವೀಕರಿಸಿದರೆ ಮುಂದಿನ ಒಂದು ವರ್ಷ ನಾಲ್ಕು ತಿಂಗಳು ಅವರ ಅಧಿಕಾರಾವಧಿಯಿರುತ್ತದೆ.