ವೈದ್ಯರನ್ನ ಕಿಡ್ನ್ಯಾಪ್ ಮಾಡಿ 5 ಕೋಟಿ ಬೇಡಿಕೆ ಇಟ್ಟಿದ್ದ ಓಲಾ ಡ್ರೈವರ್..!

ಗುರುವಾರ, 20 ಜುಲೈ 2017 (14:54 IST)
ಓಲಾ ಕ್ಯಾಬ್ ಡ್ರೈವರೊಬ್ಬ ವೈದ್ಯನನ್ನ ಕಿಡ್ನ್ಯಾಪ್ ಮಾಡಿ 14 ದಿನಗಳ ಕಾಲ ಒತ್ತೆಯಾಳಾಗಿರಿಸಿಕೊಂಡು 5 ಕೋಟಿ ರೂಪಾಯಿ ಸುಲಿಗೆಗೆ ಯತ್ನಿಸಿರುವ ಘಟನೆ ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.
 

ಪೊಲೀಸರು ಹೆಳುವ ಪ್ರಕಾರ, ದಕ್ಷಿಣ ದೆಹಲಿಯಲ್ಲಿ ವೈದ್ಯನನ್ನ ಕಿಡ್ಯ್ನಾಪ್ ಮಾಡಲಾಗಿದ್ದು, 14 ದಿನಗಳ ಬಳಿಕ ಮೀರತ್`ನಲ್ಲಿ ರಕ್ಷಿಸಲಾಗಿದೆ. ಉತ್ತರ ಪ್ರದೇಶ ಮತ್ತು ದೆಹಲಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ವೈದ್ಯನನ್ನ ರಕ್ಷಿಸಲಾಗಿದೆ. ವೈದ್ಯನನ್ನ ಬಂಧಿಸಿದ್ದ ಗುಂಪು ಹರಿದ್ವಾರದಲ್ಲಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು, ಬಂಧನಕ್ಕೆ ತೆರಳಿದಾಗ ಮತ್ತೆ ನಾಪತ್ತೆಯಾಗಿದ್ದರು. ಬಳಿಕ ಮೀರತ್ ಬಳಿಯ ಹಳ್ಳಿಯೊಂದರಲ್ಲಿ ಗುಂಡಿನ ಕಾರ್ಯಾಚರಣೆ ನಡೆಸಿ ಅಪಹರಣಕಾರರನ್ನ ಬಂಧಿಸಿದ್ದಾರೆ.

ಜುಲೈ 6ರಂದು ತೆಲಂಗಾಣ ಮೂಲದ ಡಾ. ಶ್ರೀಕಾಂತ್ ಗೌಡ ಆಸ್ಪತ್ರೆಯಿಂದ ಮನೆಗೆ ತೆರಳಲು ಓಲಾ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಕ್ಯಾಬ್ ಡ್ರೈವರ್ ಮನೆಗೆ ಕರೆದೊಯ್ಯುವ ಬದಲು ವೈದ್ಯನನ್ನ ನೋಯ್ಡಾ ಬಳಿಯ ದಾಂದ್ರಿಗೆ ಕರೆದೊಯ್ದಿದ್ದ. ಅಲ್ಲಿ ಕಾರು ಹತ್ತಿಕೊಂಡ ನಾಲ್ವರು ಆಗಂತುಕರು ಡ್ರೈವರ್ ಜೊತೆ ಸೇರಿ ವೈದ್ಯನನ್ನ ಕಿಡ್ನ್ಯಾಪ್ ಮಾಡಿದ್ದಾರೆ.


ಬಳಿಕ ಡ್ರೈವರ್ ಫೋನಿನಿಂದ ಓಲಾ ಕಾಲ್ ಸೆಂಟರ್`ಗೆ ಕರೆ ಮಾಡಿದ ಅಪಹರಣಕಾರರು 5 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಬಳಿಕ ಖಾಸಗಿ ಆಸ್ಪತ್ರೆಯಿಂದ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಬಳಿಕ ಆಸ್ಪತ್ರೆಗೆ ಡ್ರೈವರ್ ಮೊಬೈಲ್ ಮೂಲಕ ವಿಡಿಯೋ ಕಳುಹಿಸಿದ್ದರು.  13 ದಿನ ಅಪಹರಣಕಾರರು ಮೊಬೈಲ್ ಬಳಸಿರಲಿಲ್ಲ. ಅಪಹರಣಕಾರರು ಕಳುಹಿಸಿದ್ದ ವಿಡಿಯೋ ಜಾಡು ಹಿಡಿದ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ