ಗುಜರಾತ್, ಬಿಹಾರ್, ಯುಪಿಯಲ್ಲೂ ಆಪರೇಷನ್ ಕಮಲ?

ಶನಿವಾರ, 29 ಜುಲೈ 2017 (13:36 IST)
ಗುಜರಾತ್ ರಾಜ್ಯದಲ್ಲಿ ಆಪರೇಶನ್ ಕಮಲ ನಡೆಸಿ ಆರು ಕಾಂಗ್ರೆಸ್ ಶಾಸಕರನ್ನು ಬಲಿ ಪಡೆದ ನಂತರ ಇದೀಗ ಉತ್ತರಪ್ರದೇಶಕ್ಕೂ ಆಪರೇಷನ್ ಕಮಲ ವಿಸ್ತರಿಸುವ ಸಾಧ್ಯತೆಗಳಿವೆ. 
 
ಉತ್ತರಪ್ರದೇಶಕ್ಕೆ ಇಂದು ತೆರಳುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇಬ್ಬರು ಸಮಾಜವಾದಿ ಪಕ್ಷದ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
 
ಸಮಾಜವಾದಿ ಪಕ್ಷದ ಇಬ್ಬರು ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಶಾಸಕರ ರಾಜೀನಾಮೆಗೆ ಆಪರೇಷನ್ ಕಮಲವೇ ಕಾರಣ ಎನ್ನಲಾಗುತ್ತಿದೆ.
 
ಬಿಹಾರ್ ರಾಜ್ಯದಲ್ಲಿ ವಿಪಕ್ಷಗಳ ಪರವಾಗಿ ಜನತೆ ತೀರ್ಪು ನೀಡಿದ್ದರೂ ಅಧಿಕಾರ, ಹಣಬಲದಿಂದ ಶಾಸಕರಿಗೆ ಖರೀದಿಸಿ ಇಲ್ಲವೇ ಬೆದರಿಸಿ ಸರಕಾರವನ್ನೇ ಉರುಳಿಸುವಂತಹ ಕೆಟ್ಟ ರಾಜಕೀಯ ಬಿಜೆಪಿ ಮಾಡುತ್ತಿದೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಕಿಡಿಕಾರಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ