ಪ್ರತಿಪಕ್ಷಗಳು 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ- ಪ್ರಧಾನಿ ಮೋದಿ ವ್ಯಂಗ್ಯ

ಬುಧವಾರ, 1 ಮೇ 2019 (09:42 IST)
ಲಖನೌ : ಪ್ರತಿಪಕ್ಷಗಳು 'ಖಿಚಡಿ' ಸರಕಾರ ರಚಿಸಿ, ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.




ಉತ್ತರ ಪ್ರದೇಶದಲ್ಲಿ ಮಂಗಳವಾರ ಬಿರುಸಿನ ಪ್ರಚಾರ ನಡೆಸಿದ ಪ್ರಧಾನಿ, ' ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನ ಗಿಟ್ಟಿಸಲೂ ಯೋಗ್ಯತೆ ಇಲ್ಲದ ಎದುರಾಳಿ ಪಕ್ಷಗಳು ಈಗ ಪ್ರಧಾನಿ ಪಟ್ಟಕ್ಕೇರುವ ಕನಸು ಕಾಣುತ್ತಿದ್ದಾರೆ. ಈಗ ನಾಲ್ಕು ಹಂತಗಳ ಮತದಾನ ಮುಗಿದಿದ್ದು ಇದರಲ್ಲಿ 50-55 ಸೀಟು ಕೂಡ ಪ್ರತಿಪಕ್ಷಗಳಿಗೆ ದಕ್ಕುವುದಿಲ್ಲ. ಆದರೂ ಅವರಿಗೆ ಪ್ರಧಾನಿ ಪಟ್ಟದ ಕನಸು. ಅದಕ್ಕಾಗಿ ಕೋಟು ಹೊಲಿಸುವ ಗಡಿಬಿಡಿ ಶುರುವಾಗಿದೆ ಎಂದು ಟೀಕಿಸಿದ್ದಾರೆ.


ಬಿಜೆಪಿ ಮಣಿಸಲು ಅನುಕೂಲ ಸಿಂಧು ಹೊಂದಾಣಿಕೆ ಮಾಡಿಕೊಂಡಿರುವ ಎಸ್ಪಿ-ಬಿಎಸ್ಪಿ-ಆರ್‌ಎಲ್‌ಡಿ ಮಹಾಮೈತ್ರಿ ಕೂಟದ ಎಕ್ಸ್‌ಪೈರಿ ಡೇಟ್‌ ಹತ್ತಿರ ಬಂದಿದೆ. ಮೇ 23ರ ನಂತರ ಈ ಕೂಟದ ನಾಯಕರು ಪರಸ್ಪರ ಹೊಡೆದಾಡಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ