ಪಾಕ್ ಗೂಢಚಾರನ ಬಂಧನ: 2 ಸಿಮ್‌ ಕಾರ್ಡ್, ಸೇನಾ ನಕ್ಷೆ ವಶ

ಶನಿವಾರ, 22 ಅಕ್ಟೋಬರ್ 2016 (15:13 IST)
ಪಾಕಿಸ್ತಾನದ ಪರ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತೀಯ ಸೇನೆಪಡೆಗಳು ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯಿಂದ ಭಾರತೀಯ ಸೇನಾಪಡೆಯ ನಕ್ಷೆಗಳು ಮತ್ತು ಎರಡು ಪಾಕಿಸ್ತಾನಿ ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
 
ಪಾಕಿಸ್ತಾನದ ಗೂಢಚಾರ ಬೋಧರಾಜ್ ಎಂಬಾತನನ್ನು ಸೇನಾಪಡೆಗಳು ವಿಚಾರಣೆ ನಡೆಸುತ್ತಿದ್ದು, ಆರೋಪಿ ಜಮ್ಮು ಜಿಲ್ಲೆಯ ಅಮಿಯಾ ಪಟ್ಟಣದ ನಿವಾಸಿ ಎನ್ನುವುದು ಪತ್ತೆಯಾಗಿದೆ. ಮತ್ತಷ್ಟು ಮಾಹಿತಿಗಳು ಲಭಿಸುವ ಸಾಧ್ಯತೆಗಳಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.  
 
ಏತನ್ಮಧ್ಯೆ, ಪಾಕಿಸ್ತಾನಿ ಸೇನಾಪಡೆಗಳು ಆರ್‌.ಎಸ್.ಪುರಾ ಸೆಕ್ಟರ್‌ನಲ್ಲಿ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿವೆ. ಗಡಿಯಲ್ಲಿರುವ ಗ್ರಾಮಸ್ಥರಿಗೆ ಮನೆಯಿಂದ ಹೊರಗೆ ಬರದಂತೆ ಸಲಹೆ ನೀಡಲಾಗಿದೆ. ಬಾರತೀಯ ಸೇನಾಪಡೆಗಳು ತಕ್ಕ ಪ್ರತ್ಯುತ್ತರ ನೀಡುತ್ತಿವೆ ಎಂದು ಜಿಲ್ಲಾಧಿಕಾರಿ ಸಿಮ್ರಾನ್ ದೀಪ್ ಸಿಂಗ್ ತಿಳಿಸಿದ್ದಾರೆ.
 
ಬಿಎಸ್‌ಎಫ್ ಪಡೆಗಳು ಏಳು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇಡು ತೀರಿಸಿಕೊಳ್ಳಲು ಗುಂಡಿನ ದಾಳಿ ನಡೆಸುತ್ತಿದೆ ಎಂದು ಬಿಎಸ್ಎಫ್ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ