ಪಾಕಿಸ್ತಾನ ಸೇನಾಪಡೆಗಳು ಭಾರತದ ಮುಂಚೂಣಿ ಶಿಬಿರಗಳ ಮೇಲೆ ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿ ಮತ್ತು ಮೋರ್ಟಾರ್ ಶೆಲ್ ದಾಳಿ ಮಾಡುವ ಮೂಲಕ ಜಮ್ಮುಕಾಶ್ಮೀರದ ಪೂಂಚ್ ವಲಯದಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಕದನವಿರಾಮ ಉಲ್ಲಂಘಿಸಿದೆ. ಪೂಂಚ್ ವಲಯದಲ್ಲಿ ಭಾರತದ ಸೇನಾ ಶಿಬಿರಗಳ ಮೇಲೆ ಮಧ್ಯರಾತ್ರಿಯಿಂದ ಅಪ್ರಚೋದಿತ, ಎಡೆಬಿಡದ ಗುಂಡಿನ ದಾಳಿ ನಡೆಸಿತೆಂದು ರಕ್ಷಣಾ ವಕ್ತಾರ ತಿಳಿಸಿದರು.
ನಮ್ಮ ಪಡೆಗಳು ಸೂಕ್ತ ಪ್ರತಿರೋಧ ತೋರಿದ್ದು, ನಮ್ಮ ಪಡೆಗಳಿಗೆ ಯಾವುದೇ ಸಾವು, ನೋವು ಹಾನಿ ಸಂಭವಿಸಿಲ್ಲ. ಗುಂಡಿನ ಚಕಮಕಿ ಇನ್ನೂ ಮುಂದುವರಿದಿದೆ ಎಂದು ವಕ್ತಾರ ಹೇಳಿದ್ದಾರೆ.